ಕ್ರೀಡೆಮೈಸೂರು

ಟೆನ್ನಿಸ್ ಬಾಲ್ ಕ್ರಿಕೆಟ್ ಟ್ರೋಫಿ ಸ್ಪೀಡ್ ಬಾಯ್ಸ್ ತಂಡದ ಮುಡಿಗೆ

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ನಾಯಕರ ಬಳಗದ ಆಶ್ರಯದಲ್ಲಿ ನಡೆದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಟ್ರೋಫಿಯನ್ನು ಕುಶಾಲನಗರದ ಸ್ಪೀಡ್ ಬಾಯ್ಸ್ ತಂಡ ಮುಡಿಗೇರಿಸಿಕೊಂಡಿತು. ಬೈಲಕುಪ್ಪೆಯ ವೈ.ಬಿ.ಸಿ.ಸಿ. ಹಳೆಯೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಸರಕಾರಿ ಫ್ರೌಡ ಶಾಲೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಜೇತ ತಂಡ ನಾಲ್ಕು ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿತು. ಹಳೆಯೂರು ತಂಡ ನಾಲ್ಕು ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 6 ರನ್ ಗಳಿಸಿ ಪರಾಭವಗೊಂಡಿತು.

ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಅರೂಣ್ ನಾಯಕ್ ಪಡೆದರು. ಉತ್ತಮ ಬ್ಯಾಟ್ಸ್‍ಮ್ಯಾನ್  ಆಗಿ ರಮೇಶ್ ಕುಮಾರ್, ಉತ್ತಮ ಬೌಲರ್  ಆಗಿ ಸನ್ನಿ ಮೈಸೂರು ಹೊರಹೊಮ್ಮಿದರು. ಫೈನಲ್ ಪಂದ್ಯಕ್ಕೆ ತೀರ್ಪುಗಾರರಾಗಿ ಸುಬ್ರಮಣ್ಯ, ಹಾಗೂ ರಮೇಶ್ ನಾಯಕ  ಕಾರ್ಯನಿರ್ವಹಿಸಿದ್ದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಪಂ ಸದಸ್ಯ ವಿ.ರಾಜೇಂದ್ರ, ಅನಿ ಗೆಳೆಯರ ಬಳಗದ ಅಧ್ಯಕ್ಷ ಅನಿಲ್ ಕುಮಾರ್, ಬಾನಾಡಿ ಪ್ರಮೋಟರ್ಸ್ ಮಾಲಿಕ ರೇವಣ್ಣ, ನಾಯಕರ ಸಂಘದ ಕಾರ್ಯದರ್ಶಿ ಮರಿನಾಯಕ, ಪ್ರಮುಖರಾದ ಲೊಕೇಶ್, ಸುರೇಶ್, ರಾಕೇಶ್, ಕಾಶಿ, ಕೆ.ಟಿ. ಮಹದೇವ, ಶರತ್, ಮತ್ತಿತರರು ಉಪಸ್ಥಿತರಿದ್ದರು. (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: