ಮೈಸೂರು

ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಸೋಂಕು : ಹೆಚ್ಚುತ್ತಿರುವ ಕಂಟೈನ್ ಮೆಂಟ್ ವಲಯ

ಮೈಸೂರು,ಜು.13:- ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕಂಟೈನ್ ಮೆಂಟ್ ಝೋನ್ ಗಳು ಕೂಡ ಹೆಚ್ಚುತ್ತಲೇ ಇವೆ.

ನಿನ್ನೆ 42 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಹತ್ತು ಹೊಸ ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗಿದೆ.  7 ನೇ ಮುಖ್ಯ ರಸ್ತೆ 4 ನೇ ಕ್ರಾಸ್ ವಿದ್ಯಾರಣ್ಯಪುರಂ, ಮೈಸೂರು. ರಾಜೀವ ನಗರ, ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರ 2 ನೇ ಹಂತ ಮೈಸೂರು. ರಾಮಗೊಂಡನಹಳ್ಳಿ ಹನಗೋಡು ಹುಣಸೂರು, ಜಿ ಬ್ಲಾಕ್ ಕೆ ಎಸ್ ಆರ್ ಟಿ ಸಿ ಬನ್ನಿಮಂಟಪ ಮೈಸೂರು, 13 ನೇ ಕ್ರಾಸ್ ಗೌಸಿಯನಗರ ಮೈಸೂರು, ಬಿ ಕ್ವಾರ್ಟರ್ಸ್ 71 ಜ್ಯೋತಿ ನಗರ ಮೈಸೂರು, 2 ನೇ ಮುಖ್ಯ ರಸ್ತೆ ಬನ್ನಿಮಂಟಪ, ಮೈಸೂರರು, ಲಕ್ಷ್ಮೀನಾರಾಯಣ ಶೆಟ್ಟಿ ನಂ 108 ಜಯಲಕ್ಷ್ಮಿಪುರಂ ಮೈಸೂರು, 1 ನೇ ಮುಖ್ಯ ರಸ್ತೆ 8ನೇ ಕ್ರಾಸ್ ಜೆಸಿ ನಗರ ಮಹಾಲಕ್ಷ್ಮಿ ಬಡಾವಣೆ, ಮೈಸೂರು, ಕೆ ಟಿ ಸ್ಟ್ರೀಟ್ 4 ನೇ ಕ್ರಾಸ್ ಮಂಡಿ ಮೊಹಲ್ಲಾ, ಮೈಸೂರು ಇವುಗಳನ್ನು ಕಂಟೈನ್ ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮೈಸೂರು ಕೊರೊನಾ ಪಾಸಿಟಿವ್‌ನಿಂದ ನಿನ್ನೆ ಮೃತಪಟ್ಟವರ ಮಾಹಿತಿ ಇಂತಿದೆ.  68 ವರ್ಷದ ವ್ಯಕ್ತಿ ಉದಯಗಿರಿ ನಿವಾಸಿ. ಜುಲೈ 11 ರಂದು ಸಂಜೆ 6.40 ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು ಮಧುಮೇಹ, ಅಧಿಕ ರಕ್ತದೊತ್ತಡ, ಬ್ರಾಂಕೋಪ್ನ್ಯೂಮೋನಿಯಾದಿಂದ ( ಒಂದು ರೀತಿಯ ನ್ಯುಮೋನಿಯಾ ) ಬಳಲುತ್ತಿದ್ದರು. ಜುಲೈ 11 ರಂದು ಮೃತಪಟ್ಟಿದ್ದಾರೆ

69 ವರ್ಷದ ವ್ಯಕ್ತಿ ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಜುಲೈ 11 ರಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡ, ಐಎಚ್‌ಡಿ   ಹೃದಯ ಸಂಬಂಧಿ‌ ಸಮಸ್ಯೆ  ಮತ್ತು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಜುಲೈ 11 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ

76 ವರ್ಷದ ವ್ಯಕ್ತಿ ಮೈಸೂರು ಜಿಲ್ಲೆ ಟಿ ನರಸೀಪುರದ ನಿವಾಸಿ ಜುಲೈ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 12 ರಂದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: