ಪ್ರಮುಖ ಸುದ್ದಿಮನರಂಜನೆ

ಹೆಲ್ತ್ ಅಪಡೇಟ್ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಸ್ಥಿತಿ ಉತ್ತಮವಾಗಿದೆ

ದೇಶ(ಮುಂಬೈ)ಜು.13:- ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ಅಮಿತಾಬ್ ಬಚ್ಚನ್ ಅವರ ವಯಸ್ಸು ಮತ್ತು ಅವರ ದುರ್ಬಲ ಶ್ವಾಸಕೋಶದ ಸ್ಥಿತಿ ಮತ್ತು ಅವರ ವೈದ್ಯಕೀಯ ಇತಿಹಾಸವನ್ನು ಗಮನಿಸಿದರೆ, ಅವರಿಗೆ ನಿಯಂತ್ರಿತ ರೀತಿಯಲ್ಲಿ  ಔಷಧಿಗಳನ್ನು ನೀಡಲಾಗುತ್ತಿದೆ. ಅವರ ಶ್ವಾಸಕೋಶಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ವೈದ್ಯರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾದ ನಂತರ  ಅಮಿತಾಬ್ ಬಚ್ಚನ್ ಅವರ ಶ್ವಾಸಕೋಶದಲ್ಲಿ ಸಂಗ್ರಹವಾದ ಕಫವು ಈಗ ಗಣನೀಯವಾಗಿ ಕಡಿಮೆಯಾಗಿದೆ. ಆಮ್ಲಜನಕದ ಮಟ್ಟವೂ ಈಗ ಸಾಮಾನ್ಯವಾಗಿದೆ ಎಂದು  ಹೇಳಲಾಗುತ್ತಿದ್ದು,ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅವರಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: