ಮೈಸೂರು

ನಮ್ಮೂರು ನಮ್ಮೋರು ಸೇವಾ ಟ್ರಸ್ಟ್ ಮತ್ತು ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕೆ ಹೆಚ್ ರಾಮಯ್ಯ  ಅವರ 141 ನೇ ಜಯಂತಿ ಆಚರಣೆ

ಮೈಸೂರು,ಜು.13:- ನಮ್ಮೂರು ನಮ್ಮೋರು ಸೇವಾ ಟ್ರಸ್ಟ್ ಮತ್ತು ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕೆ ಹೆಚ್ ರಾಮಯ್ಯ  ಅವರ 141 ನೇ ಜಯಂತಿ ಅಂಗವಾಗಿ ಬೆಟ್ಟದ ತಪ್ಪಲಿನಲ್ಲಿ ಇರುವ ಅವರ ಸಮಾಧಿಗೆ ಇಂದು ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಪುಷ್ಪಾರ್ಚನೆಗೈದು  ಮಾತನಾಡಿದ ಡಿಸಪಿ ಡಾ.ಎ.ಎನ್.ಪ್ರಕಾಶ್ ಗೌಡ    ಕೆ ಹೆಚ್ ರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡಯರ್ ಅವರ ಆತ್ಮೀಯರಾಗಿದ್ದರು.  ಈ ಸಮಾಧಿಯಬ್ಬು  ನಾಲ್ವಡಿ ಕೃಷ್ಣರಾಜ ಒಡಯರ್ ಅವರೇ ನಿರ್ಮಿಸಿದ್ದಾರೆ.  ನಾಲ್ವಡಿ ಕೃಷ್ಣರಾಜ ಒಡಯರ್ ಅವರು ಬರೆಯಿಸಿದ ಬರಹವು ಸಾಕ್ಷೀ ಕರಿಸಿದೆ. ರಾಮಯ್ಯನವರ ಅಕಾಲಿಕ ಮರಣ ರಾಜಮನೆತನಕ್ಕೆ ನೋವು ತಂದಿತ್ತು.  ಅದಕ್ಕಾಗಿ ಆಪ್ತ ಮಿತ್ರನ ಅಂತ್ಯ ಸಂಸ್ಕಾರ ಅರಸರ ನೇತೃತ್ವದಲ್ಲಿ  ನಡೆದಿದೆ.  ತಮ್ಮ ಗೌರವ ಹಾಗೂ ಸಂಬಂಧಗಳ ಅನಾವರಣ  ಈ ಪದಪುಂಝಗಳ ಮೂಲಕ ಅರಸರು ಮಾಡಿದ್ದಾರೆ. ನಿಜವಾಗಿ ನಮ್ಮ ದೇಶದ ಸುಪುತ್ರನಿವನು. ಮಿತ್ರನೋರ್ವನಿರುವನೆಂದರೆ ಅವನಿಲ್ಲಿ ಮಲಗಿಹನು. ಮಿತ್ರನೆಂಬ ಆ ವಸ್ತುವಿನಲ್ಲಿ ನೂರೆಂಟು ದೋಷಗಳಿದ್ದರೂ, ಅವುಗಳನ್ನು ಮರೆಯಿಸುವ ನೂರೆಂಟು ಗುಣಗಳು ಇದ್ದವು. ಹೆಚ್ಚು ಹೇಳಲೇಕೆ ಆ ವ್ಯಕ್ತಿಗೆ ನಾವೆಲ್ಲಾ ಸೇರಿ ತಲೆ ಬಾಗಿಸುವ ಎಂದು ನಾಲ್ವಡಿ ಅವರ ಬರಹ ಸಮಾಧಿಯ ಮೇಲೆ ಬರೆಯಿಸಿದ ಬರಹ ಎದ್ದು ಕಾಣುತ್ತದೆ .

ಸಾಮಾಜಿಕ ಚಿಂತನೆಗಳ ಕನಸುಗಾರ, ಹಿಂದುಳಿದ ವರ್ಗಗಳ ನೇತಾರ, ಮೈಸೂರು ಅರಸರ ಆತ್ಮೀಯ ಸಹಚರ ಕೆ ಹೆಚ್ ರಾಮಯ್ಯನವರ 141 ನೇ ಜಯಂತಿಯ ಶುಭಾಶಯಗಳು. ಸರ್ವ ಜನರ ಹಿತದೊಳಗೇ ಸ್ವಹಿತವ ಕಂಡ ರಾಮಯ್ಯನವರು ನಮಗೆ ಆದರ್ಶವಾಗಲಿ. ಸರ್ವ ಜನರ ಹಿತದೊಳಗೇ ಸ್ವಹಿತವ ಕಂಡ ರಾಮಯ್ಯನವರು ನಮಗೆ ಆದರ್ಶವಾಗಲಿ ಎಂದು   ‌ಹೇಳಿದರು.

ಈ ಸಂದರ್ಭದಲ್ಲಿ ನಮ್ಮೂರು ನಮ್ಮೋರು ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಗೌಡ.ಉಪಾಧ್ಯಕ್ಷ ಕುಮಾರ್ ಗೌಡ.ಪ್ರಧಾನ ಕಾರ್ಯದರ್ಶಿಗಳಾದ ಎ ರವಿ.ರವಿ ರಾಜಕೀಯ. ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನ.ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬೋರೆಗೌಡ.ಅಧ್ಯಕ್ಷ ಮಂಜು.ಗಿರೀಶ್ ಗೌಡ.ಮನೋ ವೈದ್ಯ ರವೀಶ್ ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: