ಮೈಸೂರು

ಮೊಮ್ಮಗ ಸಂವೇದ್ ಗೌಡ ಜಿ.ಹೆಚ್ ಜನ್ಮದಿನದ ಪ್ರಯುಕ್ತ ಚಾಮುಂಡಿ ಹುಲಿ ದತ್ತು ಸ್ವೀಕಾರ ನವೀಕರಣಗೊಳಿಸಿದ ಜಿ.ಟಿ.ದೇವೇಗೌಡ

ಮೈಸುರು,ಜು.13:- ಮಾಜಿ ಉನ್ನತ ಶಿಕ್ಷಣ ಸಚಿವ, ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರ ಮೊಮ್ಮಗ ಸಂವೇದ್ ಗೌಡ ಜಿ.ಹೆಚ್.ಅವರು ಮೃಗಾಲಯದ ಚಾಮುಂಡಿ ಹುಲಿ ದತ್ತು ಸ್ವೀಕಾರವನ್ನುನವೀಕರಣಗೊಳಿಸಿದ್ದಾರೆ.

ಶಾಸಕ ಜಿ.ಟಿ.ದೇವೇಗೌಡ ಅವರ ಮೊಮ್ಮಗ ಸಂವೇದ ಗೌಡ ಜಿ.ಹೆಚ್.ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಮೃಗಾಲಯದ ಚಾಮುಂಡಿ ಹುಲಿ ದತ್ತು ಸ್ವೀಕಾರವನ್ನು 1,00,000ರೂ.ಗಳನ್ನು ಪಾವತಿಸಿ ಇನ್ನೊಂದು ವರ್ಷಕ್ಕೆ ಅಂದರೆ 12/07/2020ರಿಂದ 11/07/2021ರವರೆಗೆ ನವೀಕರಿಸಿದ್ದಾರೆ.

ಮೈಸುರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ತಮ್ಮ ಕೈ ಜೋಡಿಸುವ   ಮೂಲಕ  ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ ಜಿ.ಟಿ.ದೇವೇಗೌಡ ಇವರ ಕುಟುಂಬದವರಿಗೆ ಶ್ರೀ ಚಾಮರಾಜೇಂದ್ರ ಮೃಗಾಲಯ ವಂದಿಸಿದೆ. ಪ್ರಾಣಿಗಳ ಸಂರಕ್ಷಣೆಯ ಜಂಟೀ ಪ್ರಯತ್ನದ ಯೋಜನೆಗೆ ಇದೇ ರೀತಿಯ ಬೆಂಬಲ/ಸಹಕಾರಗಳನ್ನು ಮುಂದುವರಿಸುವಂತೆ ಕೋರುತ್ತ ,ಮೃಗಾಲಯದ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವುಗಳ ಸಂರಕ್ಷಣೆಗೆ ವಿಶೇಷ ಒಲವಿನಿಂದ ತಮ್ಮ ಬೆಂಬಲವನ್ನು ನೀಡಿರುವ ಹರೀಶ್ ಗೌಡ ಜಿ.ಡಿ, ಜಿ.ಟಿ.ದೇವೇಗೌಡ ಮೈಸುರು ಇವರಿಗೆ ಮೃಗಾಲಯವು ಮತ್ತೊಮ್ಮೆ ವಂದನೆಗಳನ್ನು ತಿಳಿಸುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: