ಪ್ರಮುಖ ಸುದ್ದಿ

ದೇಶದಲ್ಲಿ ಈವರೆಗೆ 9 ಲಕ್ಷ ಜನರಿಗೆ ಕೊರೋನಾ ಸೋಂಕು : ಸತತ ಎರಡನೇ ದಿನ 28 ಸಾವಿರಕ್ಕೂ ಹೆಚ್ಚು ಪ್ರಕರಣ

ದೇಶ(ನವದೆಹಲಿ)ಜು.14:- ಭಾರತದಲ್ಲಿ ಪ್ರತಿದಿನ ದಾಖಲೆಯ ಮಟ್ಟದಲ್ಲಿ ಕೊರೋನಾ ವೈರಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ, ಭಾರತದಲ್ಲಿ ಪ್ರತಿದಿನ ಅತಿ ಹೆಚ್ಚು ಪ್ರಕರಣಗಳು ಬರುತ್ತಿವೆ.

ಅದೇ ವೇಳೆ ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9 ಲಕ್ಷ ದಾಟಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಇದುವರೆಗೆ 9 ಲಕ್ಷ 6 ಸಾವಿರ 752 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ 23,727 ಜನರು ಸಾವನ್ನಪ್ಪಿದ್ದರೆ, ಐದು ಲಕ್ಷ 71 ಸಾವಿರ ಜನರು   ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ, 28 ಸಾವಿರ 498 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, 553 ಸಾವು  ಸಂಭವಿಸಿವೆ.

ವಿಶ್ವದ ಮೂರನೇ ಅತಿ ಹೆಚ್ಚು ಪೀಡಿತ ದೇಶ

ಕೊರೋನಾ ಸೋಂಕಿನ ಸಂಖ್ಯೆಗೆ ಅನುಗುಣವಾಗಿ ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಪೀಡಿತ ದೇಶವಾಗಿದೆ. ಬ್ರೆಜಿಲ್ ನಂತರ ಕೊರೋನಾ ಸಾಂಕ್ರಾಮಿಕ ರೋಗದಿಂದ ಯುನೈಟೆಡ್ ಸ್ಟೇಟ್ಸ್ ಹೆಚ್ಚು ಪೀಡಿತ ದೇಶವಾಗಿದೆ. ಆದರೆ ನಾವು 10 ಲಕ್ಷ ಜನಸಂಖ್ಯೆಗೆ ಸೋಂಕಿತ ಪ್ರಕರಣಗಳು ಮತ್ತು ಮರಣದ ಬಗ್ಗೆ ಮಾತನಾಡಿದರೆ, ಭಾರತವು ಇತರ ದೇಶಗಳಿಗಿಂತ ಉತ್ತಮವಾಗಿದೆ. ಭಾರತಕ್ಕಿಂತ ಹೆಚ್ಚಿನ ಪ್ರಕರಣಗಳು ಅಮೆರಿಕ (3,479,365), ಬ್ರೆಜಿಲ್ (1,887,959) ನಲ್ಲಿವೆ. ದೇಶದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ವೇಗ  ವಿಶ್ವದ ಮೂರನೇ ಸ್ಥಾನದಲ್ಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: