ಮೈಸೂರು

ಕೋವಿಡ್ ಪರಿಹಾರಕ್ಕೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ

ಮೈಸೂರು,ಜು.14:- ಕೋವಿಡ್ ಪರಿಹಾರಕ್ಕೆ ಆಗ್ರಹಿಸಿ  ಕರ್ನಾಟಕ ರಾಜ್ಯ ಅನುದಾನಿತರಹಿತ ಶಾಲಾ ಕಾಲೇಜು ಬೋಧಕ ಮತ್ತು ಬೋಧಕೇತರ ಹೋರಾಟಗಾರರ ಹಿತರಕ್ಷಣಾ ಸಮಿತಿಯಿಂದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು ಮಾತನಾಡಿ  ಲಾಕ್ಡೌನ್ ನಿಂದಾಗಿ ಸಾಕಷ್ಟು ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಅದರಲ್ಲೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಈ ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕರು ಹಾಗೂ ಬೋಧಕರಿಗೆ ಅನುದಾನ ನೀಡಬೇಕು. ಎಸ್ ಎಸ್ ಎಲ್ ಸಿ ಮೌಲ್ಯಮಾಪನದಲ್ಲಿ ಭಾಗಿಯಾಗಿರುವ ಶಿಕ್ಷಕರಿಗೆ ವಿಮಾ ಸೌಲಭ್ಯ ನೀಡಬೇಕು.  ಆರ್ ಟಿ ಇ ಬಾಕಿ ಹಣವನ್ನು ಶಿಕ್ಷಣ ಸಂಸ್ಥೆಗಳಿಗೆ  ನೀಡಿ ಆ ಮೂಲಕ ಪರಿಹಾರ ನೀಡಲು ಸೂಚಿಸುವಂತೆ ಆಗ್ರಹಿಸಿದರಲ್ಲದೇ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜಶೇಖರ ಮೂರ್ತಿ, ರಾಜ್ ಸಿ, ಅಂಥೋಣಿ ಪಾಲ್, ಮಾದಪ್ಪ ಸ್ವಾಮಿ, ದೇವಸ್ವಾಮಿ, ಚಂದ್ರಶೇಖರ್, ರಘುವೀರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: