
ಮೈಸೂರು
ಎನ್ ಆರ್ ಕ್ಷೇತ್ರ ವ್ಯಾಪ್ತಿಯ ಕೆಲ ಏರಿಯಾ ಸೀಲ್ ಡೌನ್ ವಿಚಾರ; ಮಹಾನಗರ ಪಾಲಿಕೆ ತಂಡದಿಂದ ಪರಿಶೀಲನೆ
ಮೈಸೂರು,ಜು.14:- ಎನ್ ಆರ್ ಕ್ಷೇತ್ರ ವ್ಯಾಪ್ತಿಯ ಕೆಲ ಏರಿಯಾ ಸೀಲ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ತಂಡದಿಂದ ಪರಿಶೀಲನೆ ನಡೆಯಿತು.
ತಾತ್ಕಾಲಿಕ ವೈದ್ಯಕೀಯ ಕ್ಯಾಂಪ್ ತೆರೆಯಲು ಸ್ಥಳ ಪರಿಶೀಲನೆ ನಡೆಸಲಾಯಿತು. ಕೆಲ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಯಿತು. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮತ್ತವರ ತಂಡ ಕಟ್ಟಡಗಳ ಪರಿಶೀಲನೆ ನಡೆಸಿದರು. ಉದಯಗಿರಿಯ ಕೆಲ ಭಾಗಗಳಲ್ಲಿ ಸ್ಥಳ ಪರಿಶೀಲನೆ ನಡೆಯಿತು. ಧಾರಾವಿ ಮಾದರಿ ಕಾರ್ಯಾಚರಣೆಗೆ ಸಿದ್ಧತೆ ನಡೆದಿದ್ದು, ಗುರುವಾರ ಅಥವಾ ಶುಕ್ರವಾರದ ಒಳಗೆ ಎನ್ ಆರ್. ಕ್ಷೇತ್ರದ ಆಯ್ದ ಕೆಲ ಭಾಗಗಳಲ್ಲಿ ಲಾಕ್ ಡೌನ್ ಮಾಡಲಾಗುವುದು ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)