ಮೈಸೂರು

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸೇರ್ಪಡೆಗೊಂಡಿರುವ ಸ್ಪರ್ಶ ಜಾತಿ ಸಮುದಾಯವನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜು.14:- ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸೇರ್ಪಡೆಗೊಂಡಿರುವ ಸ್ಪರ್ಶ ಜಾತಿಗಳಾದ ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿ ಹೆಚ್ ಡಿ ಕೋಟೆ ಸರಗೂರು ತಾಲೂಕುಗಳ ಅಸ್ಪೃಶ್ಯ ಸಮುದಾಯಗಳ ಒಕ್ಕೂಟ ಪ್ರತಿಭಟನೆ ನಡೆಸಿದರು.

ಹೆಚ್,ಡಿ,ಕೋಟೆ ವಿಧಾನಸೌಧ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಮಾತನಾಡಿ ಅಸ್ಪೃಶ್ಯ ಜಾತಿ  ಅನಿಸಿಕೊಂಡಿರುವ ಪರಿಶಿಷ್ಟ ಜಾತಿ ಪಟ್ಟಿಗೆ ಅಕ್ರಮವಾಗಿ ಲಂಬಾಣಿ ಬೋವಿ, ಕೊರಚ, ಕೊರಮ ಸಮುದಾಯಗಳು ಸ್ಪರ್ಶ ಜಾತಿಯಾಗಿದ್ದರೂ ಅಸ್ಪೃಶ್ಯ  ಜಾತಿ ಪಟ್ಟಿಗೆ ಸೇರಿಸಿ ಕಳೆದ 70ವರ್ಷಗಳಿಂದ  ಕಾನೂನುಬಾಹಿರ ಮತ್ತು ಸಂವಿಧಾನದ ವಿರುದ್ಧವಾಗಿ ಅಸ್ಪೃಶ್ಯ ಜಾತಿ ಮೀಸಲಾತಿಯ ಸರಕಾರಿ ಸವಲತ್ತುಗಳನ್ನು ಪಡೆದುಕೊಂಡು ವಂಚಿಸಿದ್ದಾರೆ. ಇದರಿಂದ ಅಸ್ಪೃಶ್ಯ ಜಾತಿಗೆ ಮೀಸಲಿದ್ದ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸವಲತ್ತುಗಳಿಂದ ವಂಚತರಾಗಿ ವಂಚನೆ ದ್ರೋಹ, ಮೋಸದಿಂದ ಸಮಾಜದ ಮುಖ್ಯವಾಹಿನಿ ತಲುಪಲು ಸಾಧ್ಯವಾಗಿಲ್ಲ. ಈ ಕೂಡಲೇ ಭಾರತ ಸರ್ಕಾರ 4 ಸ್ಪರ್ಶ ಜಾತಿಗಳನ್ನು ಪರಿಶಿಷ್ಟಜಾತಿ ಪಟ್ಟಿಯಿಂದ ಕೈಬಿಡದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ, ಜಿಲ್ಲೆ ,ತಾಲೂಕು ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ತಹಶೀಲ್ದಾರ್ ಆರ್ ಮಂಜುನಾಥ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜೀವಿಕ ಉಮೇಶ್, ಚಾ.ನಂಜುಂಡಮೂರ್ತಿ, ಚಾ ಶಿವಕುಮಾರ್, ನಾಗರಾಜು, ರವಿ, ಬೆಟ್ಟಸ್ವಾಮಿ ಇತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: