ಪ್ರಮುಖ ಸುದ್ದಿ

ಕೊರೋನಾ ಸೋಂಕಿಗೆ ಬಿಬಿಎಂಪಿಯ ಯಲಹಂಕ ವಲಯದ ಕಂದಾಯ ಮೌಲ್ಯಮಾಪಕರು ಬಲಿ

ರಾಜ್ಯ( ಬೆಂಗಳೂರು)ಜು14:-  ಕೊರೋನಾ ಸೋಂಕಿಗೆ ಬಿಬಿಎಂಪಿಯ ಯಲಹಂಕ ವಲಯದ ಯಲಹಂಕ ಹಳೇ ಪಟ್ಟಣ ಉಪವಿಭಾಗದ ಕಂದಾಯ ಮೌಲ್ಯಮಾಪಕರು ಬಲಿಯಾಗಿದ್ದಾರೆ.

ಮೌಲ್ಯಮಾಪಕರಾದ ನಟರಾಜ್‌ (58) ಮೃತ ಅಧಿಕಾರಿ. ಮಂಗಳವಾರ ಮೃತ ಮೃತಪಟ್ಟಿದ್ದು, ಈ ಮೂಲಕ ಬಿಬಿಎಂಪಿಯ ಮೊದಲ ಅಧಿಕಾರಿ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೋನಾ ಲಕ್ಷಣಗಳು ಕಂಡು ಬಂದಿದ್ದರಿಂದ ಜೂನ್ 27ರಂದು ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೂಲತಃ ಬೆಂಗಳೂರಿನವರೇ ಆದ ನಟರಾಜ್ ನಾಗೇನಹಳ್ಳಿ ನಾರಾಯಣಪುರದ ನಿವಾಸಿ. ಬಿಬಿಎಂಪಿಯಲ್ಲಿ ಸುಮಾರು 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.  ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ನಟರಾಜ್ ಅವರ ಪುತ್ರಿ ವೈದ್ಯರಾಗಿದ್ದು ಮೊದಲು ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರ ತಾಯಿಗೂ ಸೋಂಕು ಹರಡಿತ್ತು. ಪುತ್ರಿ ಹಾಗೂ ಪತ್ನಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊರೋನಾಗೆ ಬಲಿಯಾಗಿರುವ ನಟರಾಜ್ ಅವರ ಕುಟುಂಬಕ್ಕೆ ಕೋವಿಡ್‌ ವಿಮೆ ಮೊತ್ತವಾದ 30 ಲಕ್ಷ ರೂಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಘವು ಪತ್ರ ಬರೆದಿರುವುದಾಗಿ   ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: