ದೇಶಪ್ರಮುಖ ಸುದ್ದಿ

ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ.91.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ನವದೆಹಲಿ,ಜು.15-ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) 10ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಬಾರಿ ಒಟ್ಟಾರೆ ಶೇ.91.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 91.10 ರಷ್ಟಿತ್ತು.

ನಿನ್ನೆಯಷ್ಟೇ ಸಿಬಿಎಸ್‌ಸಿ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ಇಂದು 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಫೆ. 15ರಿಂದ ಮಾ. 20 ರವರೆಗೆ ಪರೀಕ್ಷೆ ನಡೆದಿತ್ತು. ಈ ಬಾರಿ 18,73,015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 17,13,121 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕಿಯರು ಶೇ 93.31 ಬಾಲಕರು ಶೇ 90.14 ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. Cbseresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.

ಕೋವಿಡ್‌ನಿಂದಾಗಿ, ಬಾಕಿ ಉಳಿದಿದ್ದ ವಿಷಯಗಳ ಪರೀಕ್ಷೆಯನ್ನು ಮಂಡಳಿ ರದ್ದುಪಡಿಸಿತ್ತು. ಹೀಗಾಗಿ, ಪರ್ಯಾಯ ಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಿಸಲಾಗಿದೆ.

ಪ್ರದೇಶವಾರು ಫಲಿತಾಂಶ (ಶೇಕಡಾದಲ್ಲಿ): ತಿರುವನಂತಪುರ – 99.28%, ಚೆನ್ನೈ- 98.95%, ಬೆಂಗಳೂರು -98.23%, ಪುಣೆ -98.05%, ಅಜ್ಮೇರ್- 96.93%, ಪಂಚಕುಲಾ- 94.31%, ಭುವನೇಶ್ವರ್- 93.20%, ಭೋಪಾಲ್‌ -92.86%, ಛಂಡಿಗಡ-91.83%, ಪಟ್ನಾ -90.69%, ಡೆಹ್ರಾಡೂನ್ -89.72%, ಪ್ರಯಾಗ್‌ರಾಜ್- 89.12%, ನೋಯ್ಡಾ -87.51%

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ (ಎಚ್‌ಆರ್‌ಡಿ) ರಮೇಶ್‌ ನಿಶಾಂಕ್ ಪೋಖ್ರಿಯಾಲ್‌ ಅವರು, ಫಲಿತಾಂಶ ಪ್ರಕಟಿಸಿರುವ ಬಗ್ಗೆ ಖಚಿತಪಡಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: