ಮೈಸೂರು

ಎಟಿಎಂಗೆ ಹಾಕಬೇಕಿದ್ದ ಹಣ ದುರುಪಯೋಗ ಪ್ರಕರಣ: ಓರ್ವನ ಬಂಧನ

ಮಾರ್ಬಳ್ಳಿ ಹುಂಡಿಯ ನಿವಾಸಿ ಶಿವಕುಮಾರ್ ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾದ ಎಟಿಎಂಗಳಿಗೆ ತುಂಬಬೇಕಿದ್ದ 35ಲಕ್ಷರೂ.ಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರ ಮೇಲೆ ಮೈಸೂರಿನ ಕೆ.ಆರ್.ಠಾಣೆಯಲ್ಲಿ  ಮಾರ್ಚ್ 24ರಂದು ದೂರು ದಾಖಲಾಗಿತ್ತು. ಇದೀಗ ಕೆ.ಆರ್.ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಚಾಮರಾಜಮೊಹಲ್ಲಾದ ಲಾಗಿಷ್ ಸೆಲ್ಯೂಷನ್ ಉದ್ಯೋಗಿ. ಈತನನ್ನು ಮಾರ್ಚ್ 7ರಿಂದ 18ರವರೆಗೆ ಎಟಿಎಂ ಯಂತ್ರಗಳಿಗೆ ಹಣ ತುಂಬಲು ನಿಯೋಜಿಸಲಾಗಿತ್ತು. ಈ ವೇಳೆ ಆರೋಪಿ ಅವ್ಯವಹಾರ ನಡೆಸಿ 35.78 ಲಕ್ಷರೂ.ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವ್ಯವಸ್ಥಾಪಕ ಸೂರ್ಯಪ್ರಕಾಶ್ ಕೆ.ಆರ್.ಠಾಣೆಗೆ ದೂರು ದಾಖಲಿಸಿದ್ದರು, ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾದ ಎರಡು ಕಾರು ಹಾಗೂ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: