ಕ್ರೀಡೆವಿದೇಶ

ಕೊರೊನಾ ಸೋಂಕಿನಿಂದ ಗುಣಮುಖರಾದ ಬಾಂಗ್ಲಾದೇಶ ಕ್ರಿಕೆಟಿಗ ಮೊರ್ಟಜ

ಢಾಕಾ,ಜು.15- ಬಾಂಗ್ಲಾದೇಶ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಸಂಸದರೂ ಆದ ಮಶ್ರಫೆ ಮೊರ್ಟಜ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಅವರ ಪತ್ನಿ ಸುಮೊನಾ ಹಕ್ ಇನ್ನೂ ಗುಣಮುಖರಾಗಿಲ್ಲ.

ಸೋಂಕಿನಿಂದ ಗುಣಮುಖರಾಗಿರುವ ವಿಚಾರವನ್ನು ಮೊರ್ಟಜ ಅವರು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ. ‘ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ನಂಬುತ್ತೇನೆ. ದೇವರ ದಯೆ ಮತ್ತು ಎಲ್ಲರ ಹಾರೈಕೆಗಳಿಂದಾಗಿ ನಾನು ಈಗ ಕೊರೊನಾ ವೈರಸ್​ ನೆಗೆಟಿವ್​ ಆಗಿದ್ದೇನೆ. ಈ ಕಠಿಣ ಸಮಯದಲ್ಲಿ ನನ್ನೊಂದಿಗೆ ನಿಂತ ಮತ್ತು ನನಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಸೋಂಕಿತರಾಗಿರುವ ಎಲ್ಲರೂ ಸಕಾರಾತ್ಮಕವಾಗಿರಿ. ನಿಯಮಗಳಿಗೆ ಬದ್ಧರಾಗಿರಿ. ನಾವೆಲ್ಲರೂ ಒಗ್ಗೂಡಿ ವೈರಸ್​ ವಿರುದ್ಧ ಹೋರಾಡುತ್ತಿರೋಣ’ ಎಂದು ಬರೆದುಕೊಂಡಿದ್ದಾರೆ.

ಪತ್ನಿ ಕಳೆದ 2 ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಇನ್ನೂ ಪಾಸಿಟಿವ್​ ಆಗಿದ್ದಾಳೆ. ಆಕೆ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾಳೆ. ಆಕೆಗೆ ನಿಮ್ಮ ಹಾರೈಕೆಗಳು ಇರಲಿ ಎಂದಿದ್ದಾರೆ.

ಮೊರ್ಟಜಗೆ ಜೂನ್​ 20ರಂದು ಪಾಸಿಟಿವ್​ ವರದಿ ಬಂದಿತ್ತು. ಇದೀಗ ಅವರು ಗುಣಮುಖರಾಗಿದ್ದು, ವರದಿ ನೆಗಟಿವ್ ಎಂದು ಬಂದಿದೆ.

ಮೊರ್ಟಜ ಆಡಳಿತ ಪ ಅವಾಮಿ ಲೀಗ್​ ಪಾರ್ಟಿ ಸಂಸದರಾಗಿದ್ದು, ಕರೊನಾ ಹಾವಳಿಯ ಸಮಯದಲ್ಲಿ ತಮ್ಮ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. (ಎಂ.ಎನ್)

 

Leave a Reply

comments

Related Articles

error: