ಮೈಸೂರು

ಶಾರದಾ ವಿಲಾಸ ಪದವಿ ಪೂರ್ವಕಾಲೇಜಿಗೆ ಶೇ.87.22ರಷ್ಟು ಪಿಯು ಫಲಿತಾಂಶ

ಮೈಸೂರು, ಜು.15:- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಮಾರ್ಚ್ 2020ರ ವಾರ್ಷಿಕ ದ್ವಿತೀಯ ಪರೀಕ್ಷೆಯಲ್ಲಿ 87.22 ಶೇಕಡಾವಾರು ಫಲಿತಾಂಶ ದೊರಕಿದೆ.
ಪರೀಕ್ಷೆ ತೆಗೆದುಕೊಂಡಿದ್ದ 313 ವಿದ್ಯಾರ್ಥಿಗಳ ಪೈಕಿ 273 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.24 ಅತ್ಯುನ್ನತ ಶ್ರೇಣಿ, 171 ಪ್ರಥಮದರ್ಜೆ, 51 ದ್ವಿತೀಯದರ್ಜೆ, 27 ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಮನೋಜ್‍ಕುಮಾರ್‍ಜಿ.ಎಂ. 560, ಮಧುಕುಮಾರ್ ಜಿ. 555, (ಗಣಿತ 100), ಮಹದೇವಸ್ವಾಮಿ ಕೆ.ಆರ್.550, ಭರತ್ ಎಂ.545, ದಿವ್ಯಶ್ರೀ ಎಸ್.ಪಿ.540, ಮನೋಜ್ ಎಂ.536, ಮನು ಸಿ.526, ಕಾರ್ತಿಕ್‍ಕುಮಾರ್‍ಎನ್. 521, ಅಭಿಷೇಕ್ ಎಂ.520, ಸುಚಿತ್ರಾ ಎಂ.518, ಅಭಿಷೇಕ್ ಎಂ.514, ಮನೋಜ್ ವೈ.511, ಮಹಂತೇಶ ಬಾಲಕೃಷ್ಣ ಮಾಡ್ರೆ 510 ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿಚಂದನ್ ಕೆ.ಎಂ.573, (ಭೂಗೋಳಶಾಸ್ತ್ರ 100), (ಅರ್ಥಶಾಸ್ತ್ರ 100), ಜೀವನ್ ಕೆ.565, ಮಾಧುರಿ 548, ಮಹದೇವ ಎಂ.544, (ಕನ್ನಡ 100), (ಭೂಗೋಳ ಶಾಸ್ತ್ರ 100), ದಿವ್ಯಶ್ರೀ ಕೆ.537, ಯಶಸ್ವಿನಿ ಎಂ.536, (ವ್ಯವಹಾರಅಧ್ಯಯನ 100), ಸಾಗರ್‍ಆರ್.534, ಸುಪ್ರಿಯಾ 523, ಕಿರಣ್‍ಎನ್.ಎಲ್. 521, ತೇಜಸ್ವಿನಿ ಬಿ.520, ರಾಗಿಣಿ ಹೆಚ್.ಎಸ್. 512 ಅಂಕಗಳನ್ನು ತೆಗೆದುಕಾಲೇಜಿಗೆಕೀರ್ತಿತಂದಿರುತ್ತಾರೆ.ಅದಲ್ಲದೇ, ಜೀವಶಾಸ್ತ್ರ, ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್, ಸಂಸ್ಕೃತದಲ್ಲಿ 100ಕ್ಕೆ 100ರಷ್ಟು ಫಲಿತಾಂಶತಂದಿರುತ್ತಾರೆಎಂದುಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದು, ಆಡಳಿತ ಮಂಡಳಿ ಮತ್ತು ಅಧ್ಯಾಪಕ, ಅಧ್ಯಾಪಕೇತರರು ಇವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: