ಮೈಸೂರು

ಪಾಲಿಕೆ ಆಯುಕ್ತರ ಆದೇಶಕ್ಕೆ ಮನ್ನಣೆಯೇ ಇಲ್ಲ : ಕೆಲವರಿಂದ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಆಟ, ಜಾಗಿಂಗ್

ಮೈಸೂರು,ಜು.16:- ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದನ್ನು ನಿಯಂತ್ರಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ಮುಂದಿನ ಆದೇಶದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಉದ್ಯಾನವನ, ಆಟದ ಮೈದಾನಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದ್ದು, ಕೆಲವರು ಮಾತ್ರ ಈ ಆದೇಶಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಮಹಾರಾಜ ಕಾಲೇಜು ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿಂದು ಬೆಳಿಗ್ಗೆ  ಕೆಲವರು ಜಾಗಿಂಗ್ ಮಾಡುತ್ತ, ಬಾಸ್ಕೆಟ್ ಬಾಲ್ ಆಡುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಕೋವಿಡ್-19ಹರಡದಿರಲೆಂದು ನಿರ್ಬಂಧಿಸಿದ್ದರೂ ನೀವು ನಿಯಮ ಉಲ್ಲಂಘಿಸಿ ಇಲ್ಲಿ ಬಂದು ಆಡುತ್ತಿದ್ದೀರಲ್ಲ ಎಂದು ಪ್ರಶ್ನಿಸಿದ ಸಾರ್ವಜನಿಕರಿಗೇ ಸಾವು ವಿಶ್ವವಿದ್ಯಾಲಯದವರು ಎಂದು ಹೇಳಿದ್ದಾರೆನ್ನಲಾಗಿದೆ. ಅದಕ್ಕೆ ಸಾರ್ವಜನಿಕರು ಕೂಡ ವಿಶ್ವವಿದ್ಯಾನಿಲಯದವರಾದರೇನು ಅವರಿಗೆ ಕೊರೋನಾ ಬರಬಾರದು ಅಂತ ಇದೆಯಾ? ರೂಲ್ಸ್ ಎಲ್ಲರಿಗೂ ಒಂದೇ, ಪ್ರವೇಶವಿಲ್ಲ ಎಂದಾದಮೇಲೆ ಯಾರಿಗೂ ಪ್ರವೇಶವಿಲ್ಲ, ಅದನ್ನು ಮೊದಲು ತಿಳಿದುಕೊಳ್ಳಿ ಎಂದು ಕಳುಹಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಎಲ್ಲರಿಗೂ ಒಂದೇ ರೀತಿಯ ನಿಯಮ ಜಾರಿಯಲ್ಲಿರಬೇಕು, ಅದು ಯಾವ ಉನ್ನತ ಹುದ್ದೆಯಲ್ಲಿದ್ದರೂ ಅಷ್ಟೇ ಎಂದಿದ್ದು, ಈ ಕುರಿತು ಸಂಬಂಧಪಟ್ಟ ವಿಶ್ವವಿದ್ಯಾನಿಲಯದ ಕುಲಪತಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: