ಮೈಸೂರು

ಮೈಸೂರಿಗರಿಗೆ ವಿಶೇಷ ಖಾದ್ಯಗಳ ರುಚಿ

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ  ಆಕರ್ಷಣೆಯಾದ ದಸರಾ ಆಹಾರ ಮೇಳದಲ್ಲಿ ಈ ಬಾರಿ ಸಾಂಪ್ರದಾಯಿಕ ತಿಂಡಿಗಳಿಂದ ಹಿಡಿದು ಸಮಕಾಲೀನ ವಿಶೇಷ  ಖಾದ್ಯಗಳ ಪೂರೈಕೆ ಇರುತ್ತದೆ.

ದಸರಾ ಆಹಾರ ಮೇಳದ ಉಪಸಮಿತಿಯು ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಬುಧವಾರ  ವ್ಯಾಪಾರಸ್ಥರಿಗೆ ಆಹಾರ ಪದಾರ್ಥಗಳ ಸುರಕ್ಷತೆ ಮಾಡುವುದರ ಬಗ್ಗೆ ಮತ್ತು ಆಹಾರ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದರ ಬಗ್ಗೆ ಮಾಹಿತಿ ನೀಡಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಉಪನಿರ್ದೇಶಕರಾದ ಕೆ.ರಾಮೇಶ್ವರಪ್ಪ ಮಾತನಾಡಿ,  ಇಂದು ಜನರ ಆಹಾರ ಪದ್ದತಿಯಲ್ಲಿ ಅದ್ಬುತ ಬದಲಾವಣೆಗಳಾಗುತ್ತಿವೆ. ಆದ್ದರಿಂದ ಮೈಸೂರಿಗರಿಗೆ ಮತ್ತು ಪ್ರವಾಸಿಗರಿಗೆ ವಿಶೇಷ ಮತ್ತು ಅನನ್ಯ ಆಹಾರ  ಖಾದ್ಯಗಳನ್ನು ಉಣಬಡಿಸುವ ಉದ್ದೇಶದಿಂದ ಅ.1 ರಿಂದ 9 ರವರೆಗೆ ಆಹಾರ ಮೇಳವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅ.1ರ ಮ.1.30 ಕ್ಕೆ ವಿಶೇಷ ಮಕ್ಕಳಿಗೆ ಉಣಬಡಿಸುವ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ವರ್ಷ ಒಟ್ಟು 90 ಕ್ಕಿಂತ ಹೆಚ್ಚು ಮಳಿಗೆಗಳು ಅನುಮತಿ ಪಡೆದಿದ್ದು, ಅವರಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು  ಉಪಯೋಗಿಸದಂತೆ ಸೂಚನೆ ಮಾಡಲಾಗಿದೆ.ಸೂಚನೆ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಸಹ ಹೇಳಿದರು.

ಆಹಾರ ಮೇಳದಲ್ಲಿ ನಾವು 2 ರೀತಿಯ ವಿಭಾಗ ಮಾಡಿದ್ದೇವೆ. ಒಂದು ಸಸ್ಯಾಹಾರ ಮತ್ತೊಂದು ಮಾಂಸಾಹಾರ. ಅ. 2 ರಂದು ಗಾಂಧಿ ಜಯಂತಿ ಇರುವುದರಿಂದ  ಆ ದಿನ ಮಾಂಸಾಹಾರವನ್ನು ತಯಾರಿಸದಂತೆ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ.

ಅಂಗಡಿಗಳು 20*10 ಅಡಿ ಅಳತೆಯಿಂದ ಕೂಡಿದ್ದು,  ದಾಸ್ತಾನು  ಇಡಲು  ಜಾಗ ಒದಗಿಸಲಾಗಿದೆ.ಮತ್ತು ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ.

Leave a Reply

comments

Tags

Related Articles

error: