ಮೈಸೂರು

ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಒತ್ತಾಯ

ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಮನ್ವಯ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕುಮಾರ್ ನಾಯಕ್ ವರದಿಯನ್ನು ಅನುಷ್ಠಾನಗೊಳಿಸುವಂತೆ  ಒತ್ತಾಯಿಸುತ್ತೇವೆ ಎಂದು ಸಂಚಾಲಕ ಹೆಚ್.ಎಸ್.ರವಿಶಂಕರ್ ತಿಳಿಸಿದ್ದಾರೆ

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಜ್ವಲಂತ ಸಮಸ್ಯೆಯಂತೆ ಕಾಡುತ್ತಿರುವ ಪಿಯುಸಿ  ಉಪನ್ಯಾಸಕರ ವೇತನ ತಾರತಮ್ಯವನ್ನು ಸರಿಪಡಿಸಲು ಶಿಕ್ಷಣ ಇಲಾಖೆಯಲ್ಲಿ 2011 ರಲ್ಲಿ ಕಾರ್ಯದರ್ಶಿಗಳಾಗಿದ್ದ ಕುಮಾರ್ ನಾಯಕ್ ನೇತೃತ್ವದ ಸಮಿತಿ ಅಂದಿನ ಸರ್ಕಾರದ 6 ನೇ ವೇತನ ಆಯೋಗದ ಪ್ರಕಾರ 22,800ರೂ ಇರುವಂತಹ ಮೂಲ ವೇತನವನ್ನು 26,000 ರೂ ಗೆ ಏರಿಕೆ ಮಾಡಲು ಶಿಫಾರಸ್ಸು ಮಾಡಿದ್ದರೂ,ವರದಿಯನ್ನು ಅನುಷ್ಠಾನ ಮಾಡದೆ 500 ರೂ ಮಾತ್ರ ವಿಶೇಷ ಭತ್ಯೆಯನ್ನು ನೀಡುವುದರ ಮೂಲಕ ವರದಿಯ ಅನುಷ್ಠಾನವನ್ನು ಮುಂದೂಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವಿಶೇಷ ಭತ್ಯೆ ನೀಡಲು ಸಮ್ಮತಿಸಿ ಒಂದು ಹೆಚ್ಚುವರಿ ವೇತನವನ್ನು ಮೊದಲನೇ ಕಂತಿನ ರೂಪದಲ್ಲಿ ನೀಡಿದ್ದರೂ,ಇನ್ನೊಂದು ವೇತನ ಬಾಕಿ ಇರುವುದರಿಂದ,  ಈ ಸಾಲಿನಲ್ಲಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ಅಂದು ಭರವಸೆ ನೀಡಿದ್ದರು. ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಏ.2 ರಂದು  ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುಮಾರ್, ಶಂಕರ್, ಪಶುಪತಿ, ಲಕ್ಷ್ಮಣ್ ಹಾಜರಿದ್ದರು. (ಎಲ್.ಜಿ.-ಎಸ್.ಎಚ್)

Leave a Reply

comments

Related Articles

error: