ಮೈಸೂರು

ವಿದೇಶಿ ಯುವತಿಯರಿಂದ ಚಾಮುಂಡಿ ಮೆಟ್ಟಿಲುಗಳಿಗೆ ಅರಿಶಿನ-ಕುಂಕುಮ ಸೇವೆ

ಜನರ ವರ್ತನೆಯೇ ತಿಳಿಯುತ್ತಿಲ್ಲ. ಈ ಮಣ್ಣಿನ, ಈ ನಾಡಿನ ಜನತೆಗೆ ಇಲ್ಲಿನ ಸಂಸ್ಕೃತಿಗಳು ಬೇಡವಾಗುತ್ತಿವೆ. ಯುವಜನತೆ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ದೇವಸ್ಥಾನಗಳಿಗೆ ಹೋದರೆ ಅಲ್ಲಿ ಯಾವುದೇ ಭಯ ಭಕ್ತಿಗಳು ಅವರಲ್ಲಿ ಕಾಣಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ ಅದೇನೋ ಗೊತ್ತಿಲ್ಲ. ವಿದೇಶಿಯರಿಗೆ ಭಾರತೀಯ ಸಂಸ್ಕೃತಿಯ ಮೇಲೆ ಎಲ್ಲಿಲ್ಲ ಅಕ್ಕರಾಸ್ಥೆ. ಮೈಸೂರಿನ ಚಾಮುಂಡಿ ಮೆಟ್ಟಿಲುಗಳಿಗೆ ಅರಿಸಿನ ಕುಂಕುಮವಿರಿಸಿ ತಮ್ಮ ಹರಕೆಯನ್ನು ತೀರಿಸಿದ್ದಾರೆ ಈ ರಷ್ಯನ್ ಯುವತಿಯರು.

ಮೈಸೂರು ವೀಕ್ಷಣೆಗೆ ಆಗಮಿಸಿದ ರಷ್ಯನ್ ಯುವತಿಯರೀರ್ವರು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಖ್ಯಾತ ದೇಗುಲವಾದ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸಿದ್ದರು. ಅವರಿಗೆ ಇಲ್ಲಿನ ಸಂಸ್ಕೃತಿ ತುಂಬಾನೇ ಇಷ್ಟವಾಯಿತಂತೆ. ದೇವರಿಗೆ ತಮ್ಮ ಅಭಿಷ್ಟವನ್ನು ಪೂರೈಸಲು  ಏನಾದರೂ ನಡೆಸಬೇಕಲ್ಲ ಎಂಬ ಹಂಬಲ. ಅದಕ್ಕೆ ಸಿದ್ಧತೆಯನ್ನೂ ಮಾಡಿಕೊಂಡು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೆಟ್ಟಿಲಿನ ಬುಡದಿಂದಲೇ ಪ್ರತಿಯೊಂದು ಮೆಟ್ಟಿಲಿಗೂ ಅರಿಶಿನ-ಕುಂಕುಮವಿರಿಸಿ ಮುಂದೆ ಮುಂದೆ ಸಾಗುತ್ತಿರುವುದು ಕಂಡು ಬಂತು.

ನಿಜಕ್ಕೂ ಇದು ಹೆಮ್ಮೆಯ ವಿಷಯವೇ. ನಮ್ಮ ಸಂಸ್ಕೃತಿಯನ್ನು ಅವರು ಅನುಸರಿಸಿಕೊಂಡು ಹೋಗುತ್ತಿದ್ದಾರೆ ಅಂದರೆ ವಾವ್ಹ್ ಮೈ ರೋಮಾಂಚನಗೊಳ್ಳುತ್ತದೆ. ಅಷ್ಟೊಂದು ಸುಂದರ ಸಂಸ್ಕೃತಿ ನಮ್ಮದು. ನಿಜಕ್ಕೂ ಭಾರತ ಮಾತೆಯ ಮಡಿಲಲ್ಲಿ ಜನಸಿದ ನಾವುಗಳು ಪುಣ್ಯವಂತರು. ಮುಂದಿನ ಪ್ರಜೆಗಳೂ ಸಹ ವಿದೇಶಿ ಸಂಸ್ಕೃತಿಗೆ ಮಾರುಹೋಗದೆ ಇಲ್ಲಿನ ಸಂಸ್ಕೃತಿಯನ್ನು ಜತನದಿಂದ ಕಾಯ್ದುಕೊಂಡು ಹೋಗಿ ಎಂಬ ಸಣ್ಣ ಸಂದೇಶವೂ ಇದರಲ್ಲಿ ಮಿಳಿತಗೊಂಡಿರಬಹುದೇನೂ ಅನಿಸುತ್ತಿದೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: