ಪ್ರಮುಖ ಸುದ್ದಿ

 ಜೈಲಿನಲ್ಲಿರುವ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್ ಗೆ ಕೊರೋನಾ ಪಾಸಿಟಿವ್   

ದೇಶ(ನವದೆಹಲಿ)ಜು.16:- ಎಲ್ಗಾರ್ ಪರಿಷದ್ ಮತ್ತು ನಕ್ಸಲರ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಜೈಲಿನಲ್ಲಿರುವ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢ ಪಡಿಸಲಾಗಿದೆ.

ಆಸ್ಪತ್ರೆ ಆಡಳಿತವು   ಈ ಮಾಹಿತಿಯನ್ನು ನೀಡಿದ್ದು, ನ್ಯಾಯಾಂಗ ಬಂಧನದಲ್ಲಿ  ನವೀ ಮುಂಬಯಿಯ ತಾಲೋಜ ಜೈಲಿನಲ್ಲಿರುವ 80 ವರ್ಷದ ರಾವ್ ಅವರನ್ನು   ಸರ್ಕಾರಿ ಜೆಜೆ   ಆಸ್ಪತ್ರೆಗೆ ದಾಖಲಿಸಲಾಗಿದೆ.  ಜೆಜೆ ಆಸ್ಪತ್ರೆಯ ಡೀನ್ ಡಾ.ರಂಜಿತ್ ಮಾಂಕೇಶ್ವರ ಪ್ರಕಾರ ರಾವ್ ಅವರ   ವರದಿ   ಬಂದಿದ್ದು, ಇದರಲ್ಲಿ ಅವರು ಸೋಂಕಿತರು ಎಂದು ದೃಢಪಟ್ಟಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಮಂಕೇಶ್ವರ ಹೇಳಿದ್ದಾರೆ.  ತಲೆತಿರುಗುವಿಕೆ ಹಿನ್ನಲೆಯಲ್ಲಿ  ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. (ಏಜೆನ್ಸೀಸ್,ಎಸ್.ಎಚ್).

Leave a Reply

comments

Related Articles

error: