ಮೈಸೂರು

ಏ.12: ವಾರ್ಷಿಕ ಪೂಜೆ ಹವನ

ಹಳೆಯದಾಗಿದ್ದ ವೀರ ಮಡಿವಾಳ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದು, ಅದರ ವಾರ್ಷಿಕ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಚೌಡಯ್ಯ ತಿಳಿಸಿದರು .

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 12 ರಂದು ವಾರ್ಷಿಕ ಪೂಜೆ ಹವನಗಳನ್ನು ಏರ್ಪಡಿಸಲಾಗಿದೆ. ಫೆ. 1 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಜಯಂತಿ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅದೇ ಸಂದರ್ಭದಲ್ಲಿ  ಮಡಿವಾಳ ಜನಾಂಗವನ್ನು ಎಸ್.ಸಿ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದರು. ಅದೇ ಭರವಸೆಯಂತೆ ಎಸ್.ಸಿ. ಜನಾಂಗಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೇ ನೂತನವಾಗಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯದರ್ಶಿ ಮಹದೇವು, ಸಹ ಖಚಾಂಚಿ ಶಿವಶಂಕರ್, ಕಾರ್ಯಕಾರಿಣೆ ಅಧ್ಯಕ್ಷ ಪುರುಷೋತ್ತಮ್ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: