ದೇಶಪ್ರಮುಖ ಸುದ್ದಿ

ಹೈಕೋರ್ಟ್ ನಲ್ಲಿ ಸಚಿನ್ ಪೈಲಟ್ ಬಣದ ಅರ್ಜಿ ವಿಚಾರಣೆ

ಜೈಪುರ,ಜು.17-ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಇತರೆ 18 ಬಂಡಾಯ ಶಾಸಕರು ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯುತ್ತಿದೆ.

ಸಚಿನ್‌ ಪೈಲಟ್‌ ಪರ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ವಾದ ಮಂಡಿಸುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದ ಪರ ಮತೋರ್ವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದಿಸುತ್ತಿದ್ದಾರೆ.

ಈ ಮಧ್ಯೆ, ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಷಿ ಅವರು ಇಂದು ಸಂಜೆಯೊಳಗೆ ನೋಟಿಸ್ ಗೆ ಉತ್ತರಿಸುವಂತೆ ಬಂಡಾಯ ಶಾಸಕರಿಗೆ ಸೂಚನೆ ನೀಡಿದ್ದು, ಸಂಜೆ ಐದು ಗಂಟೆಗೆ ಶಾಸಕರ ನೋಟಿಸ್ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಸಿ.ಪಿ.ಜೋಷಿ ಅವರು ನೋಟಿಸ್ ನೀಡಿದ್ದು, ಇದನ್ನು ಪ್ರಶ್ನಿಸಿ ಪೈಲಟ್ ಬಣ ಹೈಕೋರ್ಟ್ ಮೆಟ್ಟಿಲೇರಿದೆ. (ಎಂ.ಎನ್)

 

 

Leave a Reply

comments

Related Articles

error: