ಪ್ರಮುಖ ಸುದ್ದಿಮನರಂಜನೆ

ಕೊರೋನಾ ದಿಂದ ಚೇತರಿಸಿಕೊಳ್ಳುತ್ತಿದೆ ಬಾಲಿವುಡ್ ಬಿಗ್ ಬಿ ಕುಟುಂಬ

ದೇಶ(ನವದೆಹಲಿ)ಜು.18:- ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಂತರ ಕೊರೋನಾದಿಂದ ಬಳಲುತ್ತಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯ ಅವರನ್ನು ಶುಕ್ರವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಜ್ವರ, ಉಸಿರಾಟದ ತೊಂದರೆ ಮತ್ತು ಗಂಟಲಿನಲ್ಲಿರುವ ನೋವಿನಿಂದಾಗಿ, ಅವರ ಫ್ಯಾಮಿಲಿ ವೈದ್ಯರು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಆರಾಧ್ಯಾಗೆ   ಲಘು ಜ್ವರ ಇತ್ತು ಆದರೆ ಈಗ ಅವರಿಬ್ಬರ ಜ್ವರವೂ ಕಡಿಮೆಯಾಗಿದೆ ಮತ್ತು ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಐಶ್ವರ್ಯ ರೈ ಅವರಿಗೆ ಬಂದ  ಜ್ವರ ಬಹಳ ಮಟ್ಟಿಗೆ ಕಡಿಮೆಯಾಗಿದೆ. ಆರಾಧ್ಯ ಜ್ವರ ಕಡಿಮೆಯಾಗಿದೆ ಮತ್ತು ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗಂಟಲಿನಲ್ಲಿನ ಸೋಂಕಿನಿಂದಾಗಿ ಐಶ್ವರ್ಯಾ ರೈ ಅವರಿಗೆ ಶೀತ-ಕೆಮ್ಮು ಕೂಡ ಹೆಚ್ಚಾಗಿತ್ತು. ಔಷಧಿಗಳನ್ನು ನೀಡಿದ ನಂತರ ಬಹಳ ಮಟ್ಟಿಗೆ ಕಡಿಮೆಯಾಗಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: