ಮೈಸೂರು

ವಿವಿಧ ಜಾತಿಯ ಗಿಡ ನೆಟ್ಟು, ಮಾಸ್ಕ್ ವಿತರಿಸುವ ಮೂಲಕ ಜಯಚಾಮರಾಜ ಒಡೆಯರ್ ಜನ್ಮದಿನ ಆಚರಿಸಿದ ಬೇರು ಫೌಂಡೇಷನ್

ಮೈಸೂರು,ಜು.18:- ಬೇರು ಫೌಂಡೇಷನ್ ವತಿಯಿಂದ ಮೈಸೂರು ಸಂಸ್ಥಾನದ ಕಡೆಯ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ ಅವರ 101ನೇ ಜಯಂತಿ ಅಂಗವಾಗಿ ‘ಜಯಚಾಮರಾಜ ಒಡೆಯರ ಒಂದು ನೆನಪು’   ಎಂಬ ಕಾರ್ಯಕ್ರಮವನ್ನು ಜಯಲಕ್ಷ್ಮೀಪುರಂ ಮಹಾಜನ ಕಾಲೇಜಿನ ಮುಂಭಾಗದಲ್ಲಿರುವ ಎಸ್ ಬಿ ಐ  ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ  ಹಾಗೂ ಪೌರ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಸುಮಾರು 200 ಮಾಸ್ಕ್ ಕೊಡುವ ಮೂಲಕ  ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ  ಮಾತನಾಡಿ ಜಯಚಾಮರಾಜ ಒಡೆಯರ್ ಜನಮುಖಿ ಆಡಳಿತಗಾರರು.  ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು ಒಪ್ಪಿ ಅರಮನೆಯ ಸಿಂಹಾಸನದಿಂದ ಇಳಿದು ನಿಜ ಅರ್ಥದಲ್ಲಿ ಮಹಾರಾಜ ಎನಿಸಿಕೊಂಡವರು  ಜಯಚಾಮರಾಜ ಒಡೆಯರ್. ಸದಾ ಪ್ರಜಾಪ್ರಭುತ್ವದ ಮಾದರಿಯಲ್ಲಿ ತಮ್ಮ ಸಂಸ್ಥಾನದ ಅಭಿವೃದ್ಧಿ ಆದ್ಯತೆಗಳನ್ನು ಗುರುತಿಸಿ ಜನಮುಖಿ ಆಡಳಿತಗಾರ ಎನ್ನುವ ರೀತಿ ಜನಮಾನಸದಲ್ಲಿ ನೆಲೆಸಿದರು ಎಂದರು.

ತಮ್ಮ ಪೂರ್ವಜರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಚಿಂತನೆ ಮಾದರಿಗಳನ್ನು ಮುಂದುವರಿಸಿದ ಜಯಚಾಮರಾಜ ಒಡೆಯರಿಗೆ ಸಂಸ್ಥಾನದ ಸಾರಥ್ಯ ಸಿಕ್ಕಿದ್ದು ಆರೇಳು ವರ್ಷವಾದರೂ ಈ ಚಿಕ್ಕ ಅವಧಿಯಲ್ಲೇ ನಿರ್ದಿಷ್ಟ ಅವಧಿಯ ಪಂಚವಾರ್ಷಿಕ ಯೋಜನೆಗಳು ಎಂಬ ಮಾದರಿಯನ್ನು ಗುರಿಯಾಗಿಸಿಕೊಂಡು ಸಾರ್ಥಕ  ಕಾರ್ಯದ ಮೂಲಕ ಸಂಸ್ಥಾನದ ಜನರ ಬದುಕು ಹಸನಾಗಲಿಕೆ ಭದ್ರ ಬುನಾದಿ ಹಾಕಿದರು ಎಂದರು.

ಸಮಾಜ ಸೇವಕರಾದ ಡಾ ಕೆ ರಘುರಾಂ ವಾಜಪೇಯಿ ಮಾತನಾಡಿ    ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮೊದಲ ಅಧ್ಯಕ್ಷರಾಗಿ ಇಡೀ ದೇಶಕ್ಕೆ ವನ್ಯಜೀವಿ ಸಂರಕ್ಷಣೆ ಮಹತ್ವ ಬೋಧಿಸಿದ ಮೈಸೂರು ಸಂಸ್ಥಾನದ ಕಡೆಯ ಮಹಾರಾಜರಾಗಿದ್ದ ಶ್ರೀಜಯ ಚಾಮರಾಜ ಒಡೆಯರ್  ಈ ಮಹಾನ್ ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಮೋಜಿಗಾಗಿ ಹುಲಿ ಬೇಟೆಯಾಡುವುದನ್ನು 1931ರಲ್ಲೇ ನಿಷೇಧಿಸಿದ್ದರು.

ಕೃಷಿಕರಾಗಿ ಬದುಕು ಕಟ್ಟಿಕೊಳ್ಳುವ ದೂರದರ್ಶಿತ್ವ  ದಿಂದ ನೀರಾವರಿ ಯೋಜನೆಗಳಿಗೆ ಹೆಚ್ಚು ಮಹತ್ವ ನೀಡಿದರು. ಭದ್ರಾ ಜಲಾಶಯ, ನುಗು ಜಲಾಶಯ, ಕಣ್ವ ಜಲಾಶಯ, ಶಿವಮೊಗ್ಗ ಜಿಲ್ಲೆಯ ಕರ್ನಲ್ ಅಣೆಕಟ್ಟು ಕೆಲವು ಪ್ರಮುಖ ಜಲಾಶಯಗಳ ರೂವಾರಿ ಅವರು. ಇದಲ್ಲದೆ ಕೃಷಿಕರಿಗೆ ನೆರವಾಗಲು ಗೋಮಾಳಗಳು, ಬಾವಿ ತೆಗೆಸುವುದು, ತೋಪುಗಳ ನಿರ್ಮಾಣ, .ಪಶುವೈದ್ಯ, ಶಾಲೆಗಳು, ಕೆರೆ ಕಟ್ಟೆಗಳ ನಿರ್ಮಾಣ ಹೀಗೆ ಗ್ರಾಮೀಣ ಜನರ ಬದುಕಿಗೆ ಬೆಳಕಾಗುವಂತ ಯೋಜನೆಗಳನ್ನು ತಂದರು. ವಿದ್ಯುತ್ ಶಕ್ತಿ ಉತ್ಪಾದನೆಯ ಮೂಲಕ ಗ್ರಾಮೀಣ ಜನರ ಮನೆ ಬೆಳಗಿಸಿದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೂ ಸ್ವತಃ ತಾವೇ ಸಾಹಿತ್ಯ ಕೃತಿಗಳನ್ನು ರಚಿಸಿದರು. ಸಂಗೀತದಲ್ಲಿ ಅಸಾಧಾರಣ ಸಾಧನೆ ಮಾಡಿದ ಅವರು ಹೊಸ ಕೀರ್ತನೆಗಳನ್ನು ಸೃಷ್ಟಿ ಮಾಡಿದ್ದರು .ಸಾಂಸ್ಕೃತಿಕ ರಾಯಭಾರಿಯಂತೆ ನಮ್ಮ ನಡುವೆ ಕಂಗೊಳಿಸಿದರು. ಪ್ರಜಾ ವಾತ್ಸಲ್ಯ. ದೂರದರ್ಶಿತ್ವ . ಸಾಹಿತ್ಯ .ಸಂಗೀತ .ಕಲೆಗಳ  ಆರಾಧಕ. ಜನಮುಖಿ ಚಿಂತಕರು ಆಗಿದ್ದು ನಮ್ಮ ಜಯಚಾಮರಾಜ ಒಡೆಯರು ನಮ್ಮ ಪಾಲಿನ ಪ್ರಾತಃಸ್ಮರಣೀಯರು ಆಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್, ನಗರಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ಮಾಜಿ ನಗರ ಪಾಲಿಕೆ ಸದಸ್ಯರಾದ ಡಾ. ಎಂ.ಕೆ ಅಶೋಕ್, ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್, ಪ್ರಧಾನ ಕಾರ್ಯದರ್ಶಿಗಳಾದ ಜೈ ಅರ್ಜುನ್ ,ಮುಖಂಡರಾದ ಕೇಬಲ್ ಮಹೇಶ್ ,ವಿಜಿಲೆನ್ಸಿ ಸದಸ್ಯರಾದ ಶಿವಪ್ರಕಾಶ್,   ಪೌರ ಕಾರ್ಮಿಕರು ಸಾರ್ವಜನಿಕರು ಬೇರು ಫೌಂಡೇಷನ್  ಸದಸ್ಯರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: