ಮೈಸೂರು

ಚುನಾವಣಾ ಆಯೋಗದಿಂದ ವಿಶೇಷ ವೀಕ್ಷಕರ ನೇಮಕ : ಡಿ.ರಂದೀಪ್

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ವಿಶೇಷ ವೀಕ್ಷಕರಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ಡಾ. ಕರುಣ ರಾಜು ಅವರನ್ನು ನೇಮಕ ಮಾಡಿದ್ದು, ಅವರು ಸೋಮವಾರ ಆಗಮಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ. ರಂದೀಪ್  ತಿಳಿಸಿದ್ದಾರೆ.
ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಏನೇ ದೂರುಗಳಿದ್ದರೆ ಇವರಿಗೆ ನೀಡಬಹುದು ಎಂದು ತಿಳಿಸಿದ್ದಾರೆ. ವಿಶೇಷ ವೀಕ್ಷಕರಾದ ಡಾ. ಕರುಣ ರಾಜು ಅವರನ್ನು ದೂರವಾಣಿ ಸಂಖ್ಯೆ : 9686320559 ಯಲ್ಲಿ ಸಂಪರ್ಕಿಸಬಹುದು.  ವಿಶೇಷ ವೀಕ್ಷಕರಿಗೆ ಲೈಸನ್ ಅಧಿಕಾರಿಯಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಂ. ಎನ್. ನಟರಾಜು ಅವರನ್ನು ನೇಮಿಸಲಾಗಿದ್ದು, ಅವರು ದೂರವಾಣಿ ಸಂಖ್ಯೆ: 9480392655 ಆಗಿದೆ. ಚುನಾವಣಾ ಸಂಬಂಧ ಏನೇ ದೂರುಗಳಿದ್ದರೂ ಇವರನ್ನು ಸಂಪರ್ಕಿಸಬಹುದು ಎಂದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: