ಮೈಸೂರು

ಬಿಜೆಪಿ ಮುಖಂಡರ ಹೇಳಿಕೆಯಿಂದ ನೋವಾಗಿದೆ : ಡಾ.ಗೀತಾ ಮಹದೇವಪ್ರಸಾದ್

ನಾನು ಸೂಕ್ಷ್ಮ ಸ್ವಭಾವದವಳು. ಹೀಗಾಗಿ ಬಿಜೆಪಿ ಮುಖಂಡರ ಹೇಳಿಕೆಯಿಂದ ನನಗೆ ನೋವಾಗಿದೆ ಅಂತಾ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಾ. ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.

ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್‍ವೈ ನನ್ನ ತಲೆ ಮೇಲೆ ಕೈ ಇಟ್ಟು ನಿನ್ನನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೇನೆ ಅಂತಾ ಹೇಳಿದ್ರು. ಆದರೆಇದೀಗ ಸುತ್ತೂರು ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಚುನಾವಣೆಗೆ ಬಂದಿದ್ದೇನೆ. ಬಿಜೆಪಿಯವರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುವ ಗೌರವನಾ ಎಂದು ಪ್ರಶ್ನಿಸಿದರು. ನಾನು ಸುಸಂಸ್ಕೃತ ಮನೆಯಿಂದ ಬಂದಿದ್ದೇನೆ. ನಾನೂ ಅವರ ರೀತಿ ಕೀಳು ಮಟ್ಟಕ್ಕೆ ಇಳಿದಿಲ್ಲ, ಇಳಿಯುವುದೂ ಇಲ್ಲ. ನಾನು ನನ್ನ ಗ್ರಾಮ ಬಿಟ್ಟು ಬೇರೆ ಕಡೆ ಬಂದಿಲ್ಲ, ಗುಂಡ್ಲುಪೇಟೆ ಪಟ್ಟಣ ಸಹ ನೋಡಿಲ್ಲ. ಇಂತಹ ಕೆಟ್ಟ ರಾಜಕಾರಣ ಇದೆ ಎಂಬ ಕಾರಣಕ್ಕೆ ನನ್ನ ಪತಿ ನನ್ನನ್ನು ಇಲ್ಲಿಗೆ ಕರೆ ತರುತ್ತಿರಲಿಲ್ಲ ಅಂತಾ ಅವರು ಹೇಳಿದರು.
ನಾನು ಯಾವತ್ತು ನಾನಾಗಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಇರಬೇಕು. ಆದರೆ ಇಲ್ಲಿ ನನ್ನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದ್ದಾರೆ. ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಮುಂದೆ ಸಹ ಇಳಿಯುವುದಿಲ್ಲ. ದಯಮಾಡಿ ಇದನ್ನು ನಿಲ್ಲಿಸಿ. ಜನರು ಒಕ್ಕೊರಲಿನಿಂದ, ಮುಖ್ಯಮಂತ್ರಿಗಳು, ಮುಖಂಡರು, ಸುತ್ತೂರು ಸ್ವಾಮೀಜಿಗಳು ಹೇಳಿದ್ದಕ್ಕೆ ಚುನಾವಣೆಗೆ ನಾನು ನಿಂತಿರೊದು. ನಾನು ನನ್ನ ಗ್ರಾಮ ಬಿಟ್ಟು ಬೇರೊಂದು ಕಡೆಗೆ ಹೋಗುವುದಿಲ್ಲ. ಯಡಿಯೂರಪ್ಪ ಹಾಗೂ ಶೋಭಾ ಅವರು ಬಂದು ನೀನೇ ನಿಲ್ಲಬೇಕು ಎಂದು ಹೇಳಿದ್ದರು. ಅವರನ್ನು ನಾನು ತಂದೆ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಇದಕ್ಕೆ ನನ್ನ ಜನರು 13 ರಂದು ಉತ್ತರ ಹೇಳುತ್ತಾರೆ ಗೀತಾ ಬೇಸರ ವ್ಯಕ್ತಪಡಿಸಿದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: