ಮೈಸೂರು

ಮಹಿಳೆಯರು ಸಬಲರಾಗಬೇಕು : ಮಂಜುಳಾ ಮಾನಸ

ಬಾಸುದೇವ ಸೋಮಾನಿ ಕಾಲೇಜು, ದೌರ್ಜನ್ಯ ದೂರು ವಿಚಾರಣಾ ಸಮಿತಿ, ಮಹಿಳಾ ವೇದಿಕೆ, ಮಾನವ ಹಕ್ಕುಗಳ ಸಮಿತಿಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತ.

ಮೈಸೂರಿನ ಕುವೆಂಪುನಗರದದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನ  ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು  ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸಮಾನತೆಯ ಸಾಕಾರದೆಡೆಗೆ ನಮ್ಮ ನಡಿಗೆ ಎಂಬ ಫಲಕದಲ್ಲಿ ಸಹಿ ಹಾಕುವುದರ ಮೂಲಕ  ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಹಿಳೆಯರು ಪ್ರತಿ ನಿಮಿಷವು ಒಂದಲ್ಲ ಒಂದು ಸಮಸ್ಯೆಯನ್ನು ಪ್ರತಿದಿನವು ಅನುಭವಿಸುತ್ತಿರುವುದನ್ನು ನಾವುಗಳು ಪತ್ರಿಕೆ, ಟಿವಿಗಳಲ್ಲಿ ನೋಡುತ್ತಿದ್ದೇವೆ, ಈ ಸಮಸ್ಯೆಗಳನ್ನು ನಾವು ನಾಶ ಮಾಡಲು ಕತ್ತಿ ಹಿಡಿದು ಹೋರಾಟ ಮಾಡಬೇಕಿಲ್ಲ.  ಪೊಲೀಸ್ ಠಾಣೆಗೆ ಹೋಗಿ ದೂರು ಕೂಡಬೇಕಿಲ್ಲ. ಆದರೆ ಸಮಾಜದ ಜನತೆ ತಮ್ಮ ಮನಸ್ಸಿನಲ್ಲಿ ಆಲೋಚನೆ ಮಾಡಿದರೆ ಸಾಕು ಮಹಿಳೆಯರ  ಮೇಲೆ ಪ್ರತಿನಿತ್ಯ ನಡೆಯುವ ದೌರ್ಜನ್ಯವನ್ನು ತಡೆಯಬಹುದು ಎಂದರು.  ಮಹಿಳೆಯರು ಹೆಚ್ಚು ಸಬಲರಾಗಬೇಕು ಅದಕ್ಕಾಗಿ ವಿಶ್ವಸಂಸ್ಥೆ ಘೋಷಿಸಿರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಸುದೇವ ಸೋಮಾನಿ ಕಾಲೇಜಿನ ಟ್ರಸ್ಟಿ ಪ್ರಭಾ ಪುಟ್ಟಸ್ವಾಮಿ, ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲ ಎಂ.ಎನ್.ಮನೋಹರ್, ಕನ್ನಡ ವಿಭಾಗದ ಪ್ರಾಧ್ಯಾಪಕಿ ಮಂಜುಳಾ.ಬಿ.ಸಿ, ಮುಂತಾದವರು ಉಸಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: