ಪ್ರಮುಖ ಸುದ್ದಿಮೈಸೂರು

ಹಿರಿಯ ರಂಗ ಭೂಮಿ ಕಲಾವಿದೆ,ಹಿರಿಯ ನಟಿ ಶಾಂತಮ್ಮ ಇನ್ನಿಲ್ಲ

ಮೈಸೂರು,ಜು.20:- ಹಿರಿಯ ರಂಗ ಭೂಮಿ ಕಲಾವಿದೆ , ಚಿತ್ರಗಳಲ್ಲಿ ನಟಿ ಶಾಂತಮ್ಮ ಎಂದೇ ಹೆಸರಾಗಿದ್ದ ಶಾಂತಾಬಾಯಿ ನಿನ್ನೆ ಸಂಜೆ  ನಿಧನ ರಾಗಿದ್ದಾರೆ.

ಅವರಿಗೆ 95 ವರ್ಷ ವಯಸ್ಸಾಗಿತ್ತು.   ಅವರು ಚಿನ್ನಾರಿ ಮುತ್ತ, ಚಂದವಳ್ಳಿಯ ತೋಟ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಶಾಂತಮ್ಮ ಡಾ. ರಾಜ್ ಅಭಿನಯದ ನಾಲ್ಕನೇ ಚಿತ್ರ “ಹರಿ ಭಕ್ತ “ಚಿತ್ರದಲ್ಲಿ ಅಭಿನಯಿಸಿದ್ದರು. ಅಂದಿನಿಂದ ಡಾ. ರಾಜ್ ಕುಮಾರ್ ಅವರಿಗೆ  ಒಡ ಹುಟ್ಟಿದ  ಅಕ್ಕನಂತೆ ಇದ್ದರು. ಅವರ ಮನೆಯಲ್ಲೇ ಒಬ್ಬ ಸದಸ್ಯರಾಗಿ ಬದುಕು ಸಾಗಿಸುತ್ತಿದ್ದರು.  ಅವರಿಗೆ ರಾಜ್ ಮನೆಯೇ ಎರಡನೇ ಮನೆಯಾಗಿತ್ತು . ರಂಗ ಭೂಮಿ ದಿನಗಳಿಂದಲೂ ರಾಜ್ ಕುಟುಂಬದೊಂದಿಗೆ ಒಡನಾಟ ಇಟ್ಟು ಕೊಂಡಿದ್ದ, ಈ ಹಿರಿಯ ನಟಿಯನ್ನ ಒಡ ಹುಟ್ಟಿದ ಸೋದರಿಯಂತೆ ಮನೆಯಲ್ಲಿ ನೋಡಿ ಕೊಂಡಿದ್ದರು ರಾಜ್ ಮತ್ತು ಪಾರ್ವತಮ್ಮ. ರಜನಿ ಕಾಂತ್ ಅಭಿನಯದ ಮೊದಲ ಹಿಟ್ ಚಿತ್ರ 1977ರಲ್ಲಿ ತೆರೆಕಂಡ “ಮುಲ್ಲೈ ಮಲರ್ ಗಳ್ ” ಚಿತ್ರದಲ್ಲಿ ಅಭಿನಯಿಸಿದ್ದರು.  ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಪೋಷಕ ಪಾತ್ರ ನಿರ್ವಹಣೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: