ಮೈಸೂರು

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮೂರು ತಿಂಗಳಲ್ಲಿ 8.36 ಕೋಟಿ ಆದಾಯ ಕುಸಿತ

ಮೈಸೂರು,ಜು.20:- ಮೈಸೂರಿನಲ್ಲಿ ಕೋವಿಡ್-19  ಭಾರೀ ಪ್ರಭಾವ ಬೀರಿದ್ದು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮೂರು ತಿಂಗಳಲ್ಲಿ 8.36 ಕೋಟಿ ಆದಾಯ ಕುಸಿತಗೊಂಡಿದೆ.

ಲಾಕ್‌ಡೌನ್ ನಿಂದಾಗಿ ಪ್ರವಾಸಿಗರು ಬಾರದ ಹಿನ್ನೆಲೆಯಲ್ಲಿ ನಷ್ಟವುಂಟಾಗಿದೆ. ವಿಶೇಷ ದರ್ಶನ ವಿಶೇಷ ಸೇವೆಯಿಂದ ಬರುತ್ತಿದ್ದ ಆದಾಯ ಇಲ್ಲವಾಗಿದೆ. ಹುಂಡಿಯಲ್ಲೂ ಹಣ ಸಂಗ್ರಹವಾಗಿಲ್ಲ. ಆಷಾಢಮಾಸದ ಶುಕ್ರವಾರ ಒಂದೇ ದಿನ 20 ರಿಂದ 30 ಲಕ್ಷ ಸಂಗ್ರಹವಾಗುತ್ತಿತ್ತು.  ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಆದಾಯ ಇಲ್ಲವಾಗಿದೆ. ಗಣ್ಯರು ಭೇಟಿ ನೀಡದ ಕಾರಣ ಹರಕೆ‌ ಕಾಣಿಕೆ ರೂಪದ ಆದಾಯಕ್ಕೂ ಬ್ರೇಕ್ ಬಿದ್ದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: