ಮೈಸೂರು

ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪಿಎಂ ದೇವೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ವಿಶ್ವನಾಥ್ ಹಗುರ ಮಾತು ; ಜೆಡಿಎಸ್ ಮುಖಂಡರ ಆಕ್ರೋಶ

ಮೈಸೂರು,ಜು.20:-  ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮಾಜಿ ಸಚಿವ ಎಚ್ ವಿಶ್ವನಾಥ್ ಹಗುರವಾಗಿ ಮಾತನಾಡಿದ್ದಾರೆಂದು ಜೆಡಿಎಸ್ ಮುಖಂಡರು ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿರುವ ಶಾಸಕ ಸಾ.ರಾ.ಮಹೇಶ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾ ಜನತಾ ದಳ  (ಜಾತ್ಯಾತೀತ )  ಘಟಕದ ಅಧ್ಯಕ್ಷರಾದ    ಎನ್.  ನರಸಿಂಹಸ್ವಾಮಿ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಸ್ವಾಮಿ, ದೇವೇಗೌಡರನ್ನು ಹಾಡಿ ಹೊಗಳುತ್ತಿದ್ದೀರಿ, ಈಗ ಸಚಿವ ಸ್ಥಾನ ಸಿಗದಿದ್ದಾಗ ಅವರ ವಿರುದ್ಧ ಮಾತನಾಡ್ತೀರಿ. ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್. ಪಕ್ಷಾಂತರ ಮಾಡಿ ಈಗ ಜೆಡಿಎಸ್ ನಾಯಕರ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಪಕ್ಷದಲ್ಲಿದ್ದಾಗ ಈ ಪಕ್ಷ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ನಾನು ಇರುವವರೆಗೂ ಪಕ್ಷಕ್ಕೆ ದುಡಿಯುತ್ತೇನೆ ಅಂದಿದ್ರಿ. ಈಗ ಅಂತಹವರ ವಿರುದ್ಧವೇ ಮಾತನಾಡ್ತೀರಿ. ಕಾಂಗ್ರೆಸ್ ನಲ್ಲಿ ನೀವು ಮೂಲೆಗುಂಪು ಆಗಿದ್ದಾಗ ಹುಣಸೂರಲ್ಲಿ ಎಂಎಲ್ ಎ ಮಾಡಿದ್ರು. ಹುಣಸೂರಿನಲ್ಲಿ ಸಾ ರಾ ಮಹೇಶ್ ಅವರು ನಿಮ್ಮನ್ನು ಗೆಲ್ಲಿಸಿಕೊಂಡು ಬಂದ್ರು. ನಿಮಗೆ ನೈತಿಕತೆ ಇದ್ದರೆ ಜೆಡಿಎಸ್ ಬಗ್ಗೆ ಮಾತನಾಡಬೇಡಿ. ಇನ್ನು ಮುಂದಾದರೂ ಈ ಬಾಲಿಶ ಹೇಳಿಕೆ ನೀಡೋದನ್ನು ನಿಲ್ಲಿಸಿ. ನಿಮ್ಮ ಹಿರಿತನದ ಮೇಲೆ ಗೌರವ ಇದೆ. ಹುಣಸೂರು ಎಂಎಲ್ ಎ ಆದಾಗ ಸಾ ರಾ ಮಹೇಶ್ ಎಷ್ಟು ಮತ ಹಾಕಿಸಿದ್ದಾರೆ ಅಂತ ತಿಳಿದುಕೊಳ್ಳಿಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ  ಜಿಪಂ ಮಾಜಿ ಸದಸ್ಯ ಎಂ ಟಿ ಕುಮಾರ್  ಮತ್ತಿತರ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: