ಮೈಸೂರು

ಜೀವನದಲ್ಲಿ ಸಾಧನೆಗೈಯ್ಯಲು ಮಹಾನ್ ವ್ಯಕ್ತಿಗಳ ಹಾದಿ ಅನುಸರಿಸಿ : ಡಾ.ಎಸ್.ಶಿವರಾಜಪ್ಪ

ನಟರಾಜ ಪ್ರತಿಷ್ಠಾನ , ಅಲ್ಲಮ್ಮಪ್ರಭು ಜಯಂತಿ ಮತ್ತು ಶ್ರೀ ಬಸವಲಿಂಗಸ್ವಾಮಿಗಳ ಪುಣ್ಯಾರಾಧನೆ ಮತ್ತು ಹೊಸಮಠದ ಶ್ರೀಗಳ ಸಂಪುಟ -1 ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವನ್ನು  ಮೈಸೂರಿನ ನಟರಾಜ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮವನ್ನು  ಮೈಸೂರು ವಿವಿಯ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಉದ್ಘಾಟಿಸಿ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಲ್ಲಮ್ಮ ಪ್ರಭು ಹಾಗೂ ಬಸವಲಿಂಗಸ್ವಾಮಿ ರವರು ದೇಶ ಕಂಡ ಮಹಾನ್ ವ್ಯಕ್ತಿ. ಇವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಇಂದಿಗೂ ಇವರು ನೀಡಿದ ಕೊಡುಗೆಗಳು ಜೀವಂತವಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಹಾದಿಯನ್ನು ಅನುಸರಿಸಿದರೆ, ಜೀವನದಲ್ಲಿ ರೂಢಿಸಿಕೊಂಡರೇ ಏನನ್ನಾದರೂ ಸಾಧಿಸಬಹುದು  ಎಂದು ಅವರು ನಡೆದ ಹಾದಿಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಂದರ್ಶಕ ಪ್ರಾಧ್ಯಾಪಕ ಡಾ. ಚಂದ್ರಶೇಖರಯ್ಯ, ಪ್ರೊ. ನೀಲಗಿರಿ ತಳವಾರ್, ವಿದ್ವಾನ್  ಎಂ. ಎಸ್. ಬಸವರಾಜಯ್ಯ, ಚೂಡಾಮಣಿ, ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: