ಮೈಸೂರು

ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜಗೆ ಶುಭ ಹಾರೈಕೆ

ಮೈಸೂರು,ಜು.20:- ಭಾರತೀಯ ಜನತಾಪಾರ್ಟಿಯ ವಿಧಾನ ಪರಿಷತ್ ಸದಸ್ಯ, ಸಮಾಜದ ಮುಖಂಡರಾದ  ಎಂಟಿಬಿನಾಗರಾಜ್ ಅವರ ಜನ್ಮದಿನದ ಪ್ರಯುಕ್ತ ಮೈಸೂರು ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಜೋಗಿಮಂಜು ನೇತೃತ್ವದಲ್ಲಿ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಶುಭಾಶಯ ತಿಳಿಸಲಾಯಿತು.

ತಾಯಿ ಚಾಮುಂಡೇಶ್ವರಿ ದೇವಿ ಮತ್ತು ಶ್ರೀಕಂಠೇಶ್ವರ ಸ್ವಾಮಿಯು ನಿಮಗೆ ಮತ್ತು ನಿಮ್ಮ ಕುಟುಂಬ ವರ್ಗದವರಿಗೆ ಆಯಸ್ಸು ಆರೋಗ್ಯ ಸಕಲ ಸನ್ಮಂಗಳಗಳನ್ನು ಕರುಣಿಸಿ ಹರಸಲಿ ಎಂದು ಅವರ ಸ್ವಗೃಹದಲ್ಲಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ನಗರ ಅಧ್ಯಕ್ಷರಾದ ಶಿವಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಜೋಗಿಮಂಜು, ಮಾಜಿ ನಗರಪಾಲಿಕೆ ಸದಸ್ಯರಾದ ಜಯರಾಮ್,ರಮೇಶ್ ಕುರುಬಾರಳ್ಳಿ  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: