ಪ್ರಮುಖ ಸುದ್ದಿಮನರಂಜನೆ

 ನಟ ಸುಶಾಂತ್ ಸಿಂಗ್ ರಜಪೂತ್  ಕುರಿತ ಚಿತ್ರದಲ್ಲಿ  ಮುಖ್ಯಪಾತ್ರದಲ್ಲಿರಲಿದ್ದಾರೆ ಸಚಿನ್ ತಿವಾರಿ !

ದೇಶ(ನವದೆಹಲಿ)ಜು.21:-  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ, ಟಿಕ್ ಟಾಕ್  ತಾರೆ ಸಚಿನ್ ತಿವಾರಿ ಅವರ ಜೀವನ ಪ್ರೇರಿತ ಚಿತ್ರ ‘ಸೂಸೈಡ್ ಯಾ ಮರ್ಡರ್: ಏಕ್ ಸ್ಟಾರ್ ಖೋ ಗಯಾ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಿಕ್ ಟಾಕ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನೇ ಹೋಲುತ್ತಿದ್ದು, ಹೆಸರು ಗಳಿಸಿದ ಸಚಿನ್ ತಿವಾರಿ, ಇದರಲ್ಲಿ ಸುಶಾಂತ್   ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ಶೇಖರ್ ಗುಪ್ತಾ ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸಚಿನ್ ತಿವಾರಿ ಅವರಿಗೆ ಮುಖ್ಯ ಪಾತ್ರವನ್ನು ನೀಡಲಾಗಿದೆ. ಮಾಹಿತಿಯ ಪ್ರಕಾರ, ಈ ಚಿತ್ರದ ಶೂಟಿಂಗ್ ಅನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದ್ದು,  ಇದರ ಹೆಚ್ಚಿನ ಶೂಟಿಂಗ್ ಮುಂಬೈ ಮತ್ತು ಪಂಜಾಬ್‌ನಲ್ಲಿ ನಡೆಯಲಿದೆ.   ಚಿತ್ರವನ್ನು ಈ ವರ್ಷ ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

ಈ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿದ ಚಿತ್ರದಲ್ಲಿ ಸಚಿನ್ ತಿವಾರಿ ಅವರನ್ನು ಕಾಣಬಹುದಾಗಿದೆ.   (ಏಜೆನ್ಸೀಸ್,ಎಸ್.ಎಚ್).

Leave a Reply

comments

Related Articles

error: