ಮೈಸೂರು

ಅಕ್ರಮ ಮರಳು ಸಾಗಾಣಿಕೆ : ಲಾರಿ ವಶ

ಬೈಲಕುಪ್ಪೆ  :  ಇಲ್ಲಿಗೆ ಸಮೀಪದ ಕಾವೇರಿ ಹೊಳೆಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡುವಾಗ ಮರಳು ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಲಕುಪ್ಪೆ ಗೋಲ್ಡನ್ ಟೆಂಪಲ್‍ನತ್ತ ಅಕ್ರಮ ಮರಳನ್ನು ಸಾಗಿಸುತ್ತಿರುವ ಮಾಹಿತಿಯನ್ನು ಪಡೆದುಕೊಂಡ ಬೈಲಕುಪ್ಪೆ ಠಾಣಾಧಿಕಾರಿ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಇರ್ಪಾನ್ ಸೇರಿ ಅಶೋಕ್ ಲೈಲ್ಯಾಂಡ್ ಲಾರಿಯನ್ನು ಮಂಗಳವಾರ ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.
ಕರ್ತವ್ಯದಲ್ಲಿ ನಿರತರಾಗಿದ್ದ ಪೋಲಿಸ್ ಸಿಬ್ಬಂದಿಯನ್ನು ನೋಡಿದ ಲಾರಿ ಚಾಲಕ ಮತ್ತು ಇನ್ನಿಬ್ಬರು ಸ್ಥಳದಲ್ಲಿ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಬೈಲಕುಪ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ  ದಾಖಲುಗೊಂಡಿದೆ. (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: