
ಮೈಸೂರು
ಬೈಕ್ ಗಳ ನಡುವೆ ಡಿಕ್ಕಿ : ಗಾಯ
ಮೈಸೂರು,ಜು.22:- ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸವಾರರಲ್ಲಿ ಇಬ್ಬರು ಸಣ್ಣಪುಟ್ಟಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು. ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸರಸ್ವತಿಪುರಂ ಬೇಕ್ ಪಾಯಿಂಟ್ ಬಳಿ ನಡೆದಿದೆ.
ನಿನ್ನೆ ರಾತ್ರಿ ಎಲ್ ಜಿ.ವೃತ್ತದ ಮಾರ್ಗವಾಗಿ ಕುಕ್ಕರಹಳ್ಳಿ ಕೆರೆಯ ಕಡೆ ಡ್ಯೂಕ್ ಬೈಕಿನಲ್ಲಿ ಯುವಕನೋರ್ವ ಚಲಿಸುತ್ತಿದ್ದ. ಈ ವೇಳೆ ಟಿ.ಕೆ.ಲೇ ಔಟ್ ಮಾರ್ಗವಾಗಿ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡೂ ಬೈಕಿನಲ್ಲಿದ್ದ ಸವಾರರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು ಮೂವರು ಸವಾರರಿಗೂ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ,
ಕೆ.ಆರ್.ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)