ಪ್ರಮುಖ ಸುದ್ದಿಮೈಸೂರು

ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್  ಅವರೊಂದಿಗೆ ಸಿಐಎಸ್ಪಿಎಂಎಎಂ  ಆಡಳಿತ ಮಂಡಳಿಯ ಸಭೆ 

ಮೈಸೂರು/ಬೆಂಗಳೂರು,ಜು.23:- ಸಿ.ಬಿ.ಎಸ್.ಸಿ., ಐ.ಸಿ.ಎಸ್.ಸಿ. ರಾಜ್ಯ ಪಠ್ಯಕ್ರಮ ಶಾಲೆಗಳ ಒಕ್ಕೂಟದಿಂದ ಮೈಸೂರು ಉಸ್ತುವಾರಿ ಸಚಿವರ ಭೇಟಿ ಮಾಡಿ ಖಾಸಗಿ ಶಾಲೆಯವರು ಅನುಭವಿಸುತ್ತಿರುವ ವಿಷಯಗಳ ಕುರಿತು ಚರ್ಚಿಸಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ   ಎಸ್. ಟಿ ಸೋಮಶೇಖರ್ ಅವರು ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಭೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ಖಾಸಗಿ ಶಾಲೆಗಳ ನಿಯೋಗವು ಮನವರಿಕೆ ಮಾಡಿಕೊಟ್ಟಿತ್ತು.

ಇಂದು ಸಚಿವರಾದ   ಎಸ್. ಟಿ ಸೋಮಶೇಖರ್ ಅವರ ನೇತೃತ್ವದಲ್ಲಿ ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್  ಅವರನ್ನು ಭೇಟಿ ಮಾಡಿ ಖಾಸಗಿ ವಿದ್ಯಾ ಸಂಸ್ಥೆಗಳ ಸಮಸ್ಯೆ ಯನ್ನು ಸಚಿವರ ಗಮನಕ್ಕೆ ತರಲಾಯಿತು. ಸಚಿವರಲ್ಲಿ ಮುಖ್ಯವಾಗಿ ಚರ್ಚಿಸಿದ ವಿಷಯವೆಂದರೆ ಕಳೆದ ಸಾಲಿನ ಶುಲ್ಕವನ್ನು ಪೋಷಕರು ಕಟ್ಟದೇ ಇರುವುದು ಹಾಗೂ ಈ ಸಾಲಿನ ಶುಲ್ಕವನ್ನೂ ಸಹ ಪಾವತಿ ಮಾಡದೇ ಇರುವ ವಿಷಯವನ್ನು ತಿಳಿಸಲಾಯಿತು. ಈಗಾಗಲೇ ಶಿಕ್ಷಕರು ಆನ್ ಲೈನ್ ಮೂಲಕ ಈ ಸಾಲಿನ ತರಗತಿಗಳನ್ನು ಪ್ರಾರಂಭ ಮಾಡಿದ್ದರೂ ಈ ಸಾಲಿನ ಶುಲ್ಕವನ್ನು ಪಡೆಯಲು ಆಗದಿರುವುದು, ಬ್ಯಾಂಕುಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಪಡೆದಿರುವ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಿರುವುದು ಹಾಗೂ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಗಳ ವೇತನ ಪಾವತಿಸಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ನಿಯೋಗವು ತಿಳಿಸಿತು. ಜೊತೆಗೆ ಶಾಲಾ ವಾಹನಗಳ ಇನ್ಶೂರೆನ್ಸ್ ನ್ನು ಮನ್ನಾ ಮಾಡುವಂತೆ ಸಭೆಯಲ್ಲಿ ವಿನಂತಿಸಲಾಯಿತು. ಈ ಸಂಬಂಧ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ಪುನಶ್ಚೇತನಕ್ಕಾಗಿ ವಾರ್ಷಿಕ ಶುಲ್ಕದ ಹಣವನ್ನು ಕೆ.ಎಸ್.ಎಫ್.ಸಿ. ಮುಖಾಂತರ ಶೇಕಡಾ 4%ರ ಬಡ್ಡಿದರಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಸಭೆಯ ಮನವಿಗೆ ಸಂಬಂಧಿಸಿದಂತೆ ಸಚಿವರು ಸಹಾನುಭೂತಿಯಿಂದ ಎಲ್ಲವನ್ನೂ ಪರಿಶೀಲಿಸಿ, ಸರ್ಕಾರವು ಖಾಸಗಿ ಶಾಲೆಗಳ ಬಗ್ಗೆ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಸರ್ಕಾರವು ನಮಗೆ ಸಹಕಾರ ನೀಡುವುದಾಗಿ ತಿಳಿಸಿದರು.

ನಿಯೋಗದಲ್ಲಿ ಬಿಜೆಪಿ ಮುಖ್ಯಸ್ಥರಾದ ಹೆಚ್.ವಿ.ರಾಜೀವ್, ಸಿ.ಐ.ಎಸ್.ಪಿ.ಎಂ.ಎ.ಎಂ. ಉಪಾಧ್ಯಕ್ಷರುಗಳಾದ ಎಂ.ಎಲ್.ರವೀಂದ್ರ ಸ್ವಾಮಿ, ವೆಂಕಟೇಶ್, ಕಾರ್ಯದರ್ಶಿಗಳಾದ ರಾಧಾಕೃಷ್ಣ, ವಿದ್ಯಾ ಸಂಸ್ಥೆಗಳ ಮುಖಂಡರಾದ ಸೆಂಟ್ ಜೋಸೆಪ್‍ನ ವಿಜಯ್ ಕುಮಾರ್, ಮಧು, ಶ್ರೀಶೈಲ ರಾಮಣ್ಣನವರ್, ಪ್ರಭಾಕರ್, ಗಣೇಶ್  ಉಪಸ್ಥಿತರಿದ್ದರು.  (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: