ಮೈಸೂರು

ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆ ನೇಣಿಗೆ ಶರಣು

ಮೈಸೂರು,ಜು.24:-  ಐದು ತಿಂಗಳ ಹಿಂದಷ್ಟೇ ವಿವಾಹವಾದ ಗೃಹಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಟಿ.ಕೆ.ಬಡಾವಣೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಟಿ.ಕೆ.ಬಡಾವಣೆಯ ನಿವಾಸಿ ರಕ್ಷಿತಾ(21)ಎಂದು ಹೇಳಲಾಗಿದೆ. ಕಳೆದ ಐದು ತಿಂಗಳ ಹಿಂದಷ್ಟೇ ಕೆ.ಆರ್.ನಗರದ ಅರುಣ್ ಕುಮಾರ್ ಎಂಬವರ ಜೊತೆ ವಿವಾಹವಾಗಿತ್ತು. ಮಂಗಳೂರಿನಲ್ಲಿ ವಾಸವಿದ್ದ ಇವರು ಕೊರೋನಾ ಸಂಕಷ್ಟದಿಂದಾಗಿ ವಾಪಸ್ ಕೆ.ಆರ್.ನಗರಕ್ಕೆ ಬಂದಿದ್ದರು. ರಕ್ಷಿತಾ ಇತ್ತೀಚೆಗಷ್ಟೇ ಟಿ.ಕೆ.ಬಡಾವಣೆಯಲ್ಲಿರುವ ತನ್ನ ತವರು ಮನೆಗೆ ಬಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಇವರು ಬೇಸರಗೊಂಡಿದ್ದ ಇವರು ಅದೇ ಬೇಸರದಲ್ಲಿಯೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: