ಮೈಸೂರು

ಆತಂಕ ಬಿಡಿ,ಪರೀಕ್ಷೆ ಬರೆಯಿರಿ : ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ರಾಮದಾಸ್

ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಜೆ.ಎಸ್.ಎಸ್ ಪ್ರೌಢಶಾಲೆಯ ಮುಂಭಾಗ  ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಎಸ್.ಎ ರಾಮದಾಸ್ ಉಚಿತವಾಗಿ ಪೆನ್ನು ಮತ್ತು ಗುಲಾಬಿ ಹೂಗಳನ್ನು ನೀಡಿ ಆತಂಕ ಬಿಟ್ಟು ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಲು ಹೇಳಿದರು.

ಈ ಸಂದರ್ಭ ಮಾತನಾಡಿದ ಅವರು ಮಕ್ಕಳು ಎಷ್ಟೇ ಓದಿದರೂ ಅವರಲ್ಲಿ ಪರೀಕ್ಷೆಯ ಅಳುಕು ಇದ್ದೇ ಇರುತ್ತದೆ. ಅದರಿಂದ ಅವರು ಯಾವುದೇ ಧೃತಿಗೆಡದೇ ನಿರಾತಂಕವಾಗಿ ಪರೀಕ್ಷೆ ಬರೆಯಲಿ ಎನ್ನುವ ನಿಟ್ಟಿನಲ್ಲಿ ಅವರಿಗೆ ಪೆನ್ನು ಹಾಗೂ ಹೂಗಳನ್ನು ನೀಡಿ  ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಲು ಆತ್ಮ ಸ್ಥೈರ್ಯ ತುಂಬಲಾಗಿದೆ ಎಂದು ತಿಳಿಸಿದರು.

ರಾಮದಾಸ್ ಬೆಂಬಲಿಗರಾದ ಮಂಜು, ಸಂತು, ಮೋಹನ್, ವಾರ್ಡ್ ನಂಬರ್ 1 ರ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: