ಮೈಸೂರು

ಮೈಸೂರು ಮೃಗಾಲಯದ ‘’ಬ್ರಹ್ಮ’ ಇನ್ನಿಲ್ಲ

ಮೈಸೂರು,ಜು.25:- ಮೈಸೂರು ಮೃಗಾಲಯದ 20 ರ ವಯೋಮಾನದ  ಬ್ರಹ್ಮ   ಹೆಸರಿನ ಗಂಡು ಹುಲಿಯು ನಿನ್ನೆ ಮರಣ ಹೊಂದಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ್ ಕುಲಕರ್ಣಿ ತಿಳಿಸಿದ್ದಾರೆ.

ಬ್ರಹ್ಮ ಹೆಸರಿನ  ಹುಲಿಯನ್ನು 2008ರ ಮಾರ್ಚ್ 18 ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೆರಳು ಗ್ರಾಮದ ನಡುವೆ ಬ್ರಹ್ಮಗಿರಿ ಎಂಬಲ್ಲಿ ಸೆರೆ ಹಿಡಿದು ತಂದಿದ್ದರಿಂದ ಅದಕ್ಕೆ ಬ್ರಹ್ಮ ಎಂದು ನಾಮಕರಣ ಮಾಡಿ ಮೈಸೂರು ಮೃಗಾಲಯದಲ್ಲಿ   ಸಂರಕ್ಷಿಸಲಾಗಿತ್ತು. ಬ್ರಹ್ಮ ಹುಲಿಯನ್ನು  ಯೋಗ ಗುರು   ಬಿ.ಕೆ.ಎಸ್ ಐಯ್ಯಂಗಾರ್ ಅವರು ಅಜೀವ  ದತ್ತು ಪಡೆದಿದ್ದರು.

ಬ್ರಹ್ಮ ಹುಲಿಯು ವಯೋಸಹಜ  ಕಾರಣಗಳಿಂದ ನಿನ್ನೆ ಮಧ್ಯಾಹ್ನ 3 ಗಂಟೆಗೆ ಮೃತಪಟ್ಟಿದೆ. ಪ್ರಸ್ತುತ ಮೃಗಾಲಯದಲ್ಲಿ 10 ಗಂಡು ಹುಲಿ ಹಾಗೂ 6 ಹೆಣ್ಣು ಹುಲಿಗಳಿಗೆ ಪಾಲನೆ ಮಾಡಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: