ಮೈಸೂರು

ಕೊರೋನಾ ವೈರಸ್ ಸೋಂಕಿನ ಭಯದ ನಡುವೆಯೇ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಣೆ

ಮೈಸೂರು,ಜು.25:- ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ನಗರದಲ್ಲಿ ಭಕ್ತರು ಕೊರೋನಾ ವೈರಸ್ ಸೋಂಕಿನ ಭಯದ ನಡುವೆಯೇ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಾಗಪಂಚಮಿ ಅಥವಾ ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು ಪೂಜೆಯ ಅಂಗವಾಗಿ ನಾಗನಿರುವ ದೇವಸ್ಥಾನ, ಹುತ್ತಗಳಿರುವಲ್ಲಿ ಭಕ್ತರು ಭೇಟಿ ನೀಡಿ ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ನಡೆಸಿ ಹೂವು ಗಂಧ ಅರಿಶಿನಗಳಿಂದ ಅಲಂಕರಿಸಿ ಭಕ್ತಿಯಿಂದ ತಮ್ಮ ಕಷ್ಟಕಾರ್ಪಣ್ಯಗಳನ್ನು ಕಳೆಯಪ್ಪಾ ತಂದೆ ಎಮದು ಬೇಡಿಕೊಳ್ಳುತ್ತಾರೆ. ಈ ಬಾರಿ ಕೊರೋನಾ ವೈರಸ್ ಹಾವಳಿಯ ನಡುವೆಯೂ ಭಕ್ತರು ಮೈಸೂರಿನ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರಿ ದೇವಸ್ಥಾನದಲ್ಲಿರುವ ನಾಗಬನಕ್ಕೆ ತೆರಳಿ ತಮ್ಮ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿದರು.

ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತಿದ್ದು, ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಇದನ್ನು ಹೆಚ್ಚು ವೈಭವದಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೋನಾ ಮಹಾಮಾರಿಯು ಜನತೆಯ ಸಂಭ್ರಮವನ್ನು ಕಸಿದುಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: