ಪ್ರಮುಖ ಸುದ್ದಿ

ಅರಣ್ಯ ಸಚಿವ ಆನಂದ್ ಸಿಂಗ್ ಗೆ ಕೋವಿಡ್ ದೃಢ

ರಾಜ್ಯ( ಬಳ್ಳಾರಿ)ಜು.27:- ಅರಣ್ಯ ಸಚಿವ, ಹೊಸಪೇಟೆ ಶಾಸಕ ಹಾಗೂ ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿಯಾಗಿರುವ ಆನಂದ್ ಸಿಂಗ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.

ಕೋವಿಡ್ ಪರೀಕ್ಷೆ ಮಾಡಿಸಿದ್ದ ಆನಂದ್ ಸಿಂಗ್ ಅವರಿಗೆ ವರದಿ ಸಿಕ್ಕಿದ್ದು ಕೊರೋನಾ ಇರುವುದು ಖಚಿತವಾಗಿದೆ. ಆದರೆ ಯಾವ ರೋಗಲಕ್ಷಣವಿಲ್ಲದೆ ಸಚಿವರಿಗೆ ಕೊರೋನಾ ಇರುವುದು ಕಂಡುಬಂದಿದೆ.

ರೋಗಲಕ್ಷಣವಿಲ್ಲದ ಕಾರಣ ಆನಂದ್ ಸಿಂಗ್ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಹೊಸಪೇಟೆ ನಿವಾಸದಲ್ಲಿ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಸಚಿವರು ಆರೋಗ್ಯವಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಿಜ. ಅವರು ಸ್ವಯಂಪ್ರೇರಿತರಾಗಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದರೆಂದು ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸಚಿವರ ಕಾರು ಚಾಲಕನಿಗೆ ಕೂಡ ಕೊರೋನಾ ಕಾಣಿಸಿಕೊಂಡಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: