ಪ್ರಮುಖ ಸುದ್ದಿಮನರಂಜನೆ

ಕಾಲಿವುಡ್‌ ನಟ ವಿಶಾಲ್‌ ಅವರ ತಂದೆ ಜಿ.ಕೆ. ರೆಡ್ಡಿ ಅವರಿಗೆ ಕೊರೊನಾ ಪಾಸಿಟಿವ್

ದೇಶ(ನವದೆಹಲಿ)ಜು.26:- ಕಾಲಿವುಡ್‌ ನಟ ವಿಶಾಲ್‌ ಮತ್ತು ಅವರ ತಂದೆ ಜಿ.ಕೆ. ರೆಡ್ಡಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಆದರೆ ಈಗಾಗಲೇ ಚಿಕಿತ್ಸೆ ಪಡೆದಿರುವ ಅವರು ಗುಣಮುಖರಾಗಿದ್ದಾರಂತೆ.

ಈ ಕುರಿತು ವಿಶಾಲ್‌ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಇದು ನಿಜ. ನನ್ನ ತಂದೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರೊಂದಿಗೆ ಇದ್ದ ನನಗೂ ರೋಗದ ಲಕ್ಷಣಗಳು ಕಂಡುಬಂದಿತ್ತು. ವಿಪರೀತ ಜ್ವರ, ಕೆಮ್ಮು, ಶೀತ ಇತ್ತು. ನನ್ನ ಮ್ಯಾನೇಜರ್‌ಗೂ ಇದೇ ಲಕ್ಷಣ ಕಂಡುಬಂದಿತ್ತು. ನಾವೆಲ್ಲರೂ ಆಯುರ್ವೇದದ ಔಷಧಿಯನ್ನು ಪಡೆದೆವು. ಒಂದೇ ವಾರದಲ್ಲಿ ಗುಣಮುಖರಾಗಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: