ಮನರಂಜನೆ

ಮಳೆ ಹುಡುಗಿ ಪೂಜಾಗಾಂಧಿ ನಿರ್ದೇಶಕ ಜೆಡಿಯೊಂದಿಗೆ ಒಪ್ಪಂದ

ಮಳೆ ಹುಡುಗಿ ಪೂಜಾ ಗಾಂಧಿಯ ನಿರ್ಮಾತೃ ಸಂಸ್ಥೆ “ಆನ್ ಎಂಟರ್ ಟೇನ್ಮೆಂಟ್ ಫ್ಯಾಕ್ಟರಿ”ಯು ಟಾಲಿವುಡ್‍ ನಿರ್ದೇಶಕ ಜೆ.ಡಿ.ಚಕ್ರವರ್ತಿಯೊಂದಿಗೆ ಹಲವಾರು ಸಿನಿಮಾ ನಿರ್ಮಾಣದ ಒಪ್ಪಂದದ ಸಹಿ ಹಾಕಿದೆ.

ಆನ್‍  ಎಂಟರ್ ಟೇನ್ಮೆಂಟ್ ಬ್ಯಾನರ್‍ ಅಡಿ ಆರು ಚಿತ್ರಗಳನ್ನು ನಿರ್ಮಿಸಲು ಒಪ್ಪಂದವಾಗಿದ್ದು ಪೂಜಾಗಾಂಧಿ ಹಾಗೂ ನಿರ್ದೇಶಕ ಜೆಡಿ ಇವರುಗಳು ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಸುತ್ತಾಟ ಹಾಗೂ ನಿರ್ಮಾಣದ ಪೂರ್ವಾಭಾವಿ ಸಿದ್ದತೆಯಲ್ಲಿ  ಬ್ಯುಸಿಯಾಗಿ‍ದ್ದಾರೆ.

ಎಲ್ಲಾ ಆರು ಚಿತ್ರಗಳು ದ್ವಿಭಾಷೆಯಲ್ಲಿ ನಿರ್ಮಾಣಗೊಳ್ಳುವ ಸಾಧ್ಯಯಿದ್ದು, ಇನ್ನೂ ಹೆಚ್ಚಿನ ಭಾಷೆಯಲ್ಲಿ ತೆರೆ ಮೇಲೆ ಬರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಒಪ್ಪಂದದ ಬಗ್ಗೆ ನಿರ್ದೇಶಕ ಜೆಡಿ ಹಾಗೂ ಪೂಜಾಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಪೂಜಾಗಾಂಧಿ ಅವರ ಲವಲವಿಕೆ ಹಾಗೂ ಅತ್ಯುತ್ಸಾಹ ನನಗೆ ಪ್ರೇರಣೆ ತಂದಿದೆ ಎಂದಿರುವ ಜೆಡಿ, ಅವರೊಟ್ಟಿಗೆ ಕೆಲಸ ಮಾಡಲು ಉತ್ಸುಕನಾಗಿರುವೆ ಎಂದಿದ್ದಾರೆ.

ಮುಂದಿನ ವರ್ಷಗಳಲ್ಲಿ ತೆರೆಕಾಣಲಿರುವ ಸಿನಿಮಾಗಳಲ್ಲಿ ಪ್ರೊಡಕ್ಷನ್‍ಗಷ್ಟೇ  ಸಿಮೀತಗೊಂಡಿದ್ದು ಪೂಜಾಗಾಂಧಿ ‘ಬೂ ಬಿ ಅಪ್ರೈಡ್‍…ಬಿ ವೆರಿ ಅಫ್ರೈಡ್‍ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ತಾರಾಗಣ ವರ್ಗ ಇನ್ನೂ ಅಂತಿಮವಾಗಿಲ್ಲ. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: