ಮೈಸೂರು

ರಸ್ತೆಗೆ ಜಲ್ಲಿಕಲ್ಲು ಸುರಿಸಿ ಕಾಮಗಾರಿ ನಡೆಸದೆ ಗುತ್ತಿಗೆದಾರ ಎಸ್ಕೇಪ್ : ಸ್ಥಳೀಯ ವ್ಯಾಪಾರಸ್ಥರ ಆಕ್ರೋಶ

ಮೈಸೂರು,ಜು.27:- ರಸ್ತೆ ಕಾಮಗಾರಿ ಆರಂಭಿಸುವ ಮುನ್ನವೇ ಗುತ್ತಿಗೆದಾರ ಕೆಲಸ ಮಾಡಿಸಲು ಬಾರದೆ  ಇರುವುದರಿಂದ ಸ್ಥಳೀಯ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಂಜನಗೂಡು ಪಟ್ಟಣದ ಬಜಾರ್ ರಸ್ತೆಯಲ್ಲಿ ನಡೆದಿದೆ.

ನಂಜನಗೂಡು ಪಟ್ಟಣದ ಬಜಾರ್ ರಸ್ತೆಯ ಕಾಮಗಾರಿ ಆರಂಭಿಸಲು ಜಲ್ಲಿಕಲ್ಲು ಸುರಿಯಲಾಗಿದ್ದು, ರಾಶಿ ರಾಶಿ ಜಲ್ಲಿಕಲ್ಲುಗಳ ಮೇಲೆ ವಾಹನ ಸಂಚಾರ ನಡೆಸುವಂತಾಗಿದೆ. ಒಂದು ವರ್ಷದ ಹಿಂದೆ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸಲು ಜಲ್ಲಿ ಕಲ್ಲನ್ನು   ಗುತ್ತಿಗೆದಾರರು ರಸ್ತೆಗೆ ಸುರಿಸಿದ್ದರು. ಜಲ್ಲಿ ಕಲ್ಲು ಸುರಿಸಿದ ಗುತ್ತಿಗೆದಾರವ ಮರುದಿನವೇ ನಾಪತ್ತೆಯಾಗಿದ್ದಾರೆ.ಕಾಂಕ್ರೀಟ್ ರಸ್ತೆಗಾಗಿ ಒಂದು ಕೋಟಿ ರೂ.ಮಂಜೂರು ಆಗಿದೆ ಎನ್ನಲಾಗಿದೆ. ನಂಜನಗೂಡು ಹೃದಯಭಾಗದಲ್ಲಿ ಬಜಾರ್ ರಸ್ತೆ ಇದ್ದು, ವರ್ಷದ ಹಿಂದೆ ನಂಜನಗೂಡಿನ ಶಾಸಕ ಹರ್ಷವರ್ಧನ್  ಗುದ್ದಲಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ರಸ್ತೆ ಅಭಿವೃದ್ಧಿ ಪಡಿಸುವಂತೆ ಹಲವಾರು ಬಾರಿ ವ್ಯಾಪಾರಸ್ಥರು ಪ್ರತಿಭಟನೆಗಳನ್ನು ನಡೆಸಿದ್ದರು. ಇದೀಗ ರಸ್ತೆ ದುರಸ್ತಿ ಕಾರ್ಯ ನಡೆಸದೆ ಗುತ್ತಿಗೆದಾರ ಎಸ್ಕೇಪ್ ಆಗಿದ್ದು, ರಸ್ತೆಯಲ್ಲಿ ಜಲ್ಲಿಕಲ್ಲು ಸುರಿದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆಯಲ್ಲದೆ, ವಾಹನಗಳ ಚಕ್ರಕ್ಕೆ ಸಿಲುಕಿ ಕಲ್ಲುಗಳು ಆಚೆ ಈಚೆ ಸಿಡಿಯುತ್ತಿವೆ.  ಅವ್ಯವಸ್ಥೆ ಬಗ್ಗೆ ವ್ಯಾಪಾರಸ್ಥರು ಕಿಡಿ ಕಾರಿದ್ದಾರೆ. ಮಲಗಿರುವ ಅಧಿಕಾರಿಗಳು, ಶಾಸಕರು ಎಚ್ಚರಗೊಂಡು ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: