
ಮೈಸೂರು
ಮಾಧ್ಯಮ ವರದಿ ಬಳಿಕ ಎಚ್ಚೆತ್ತ ಶಿಕ್ಷಣ ಸಂಸ್ಥೆ : ಆಗಸ್ಟ್ ಕೊನೆಯವರೆಗೂ ಶುಲ್ಕ ನೀಡಲು ಅವಕಾಶ
ಮೈಸೂರು,ಜು.27:- ಬೋಗಾದಿಯಲ್ಲಿರುವ ಖಾಸಗಿ ಶಾಲೆಯೊಂದು ಶಾಲೆಯ ಶುಲ್ಕ ಕಟ್ಟಿಲ್ಲ ವೆಂದು ವಿದ್ಯಾರ್ಥಿಗಳನ್ನು ವಾಟ್ಸಾಪ್ ಗ್ರೂಪ್ ನಿಂದ ರಿಮೂವ್ ಮಾಡಿದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಆಗಸ್ಟ್ ತಿಂಗಳ ಕೊನೆಯವರೆಗೂ ಶುಲ್ಕ ಕಟ್ಟಲು ಅವಕಾಶ ನೀಡಿದೆ ಎಂದು ತಿಳಿದು ಬಂದಿದೆ.
ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಪೋಷಕರ ಜೊತೆ ಸಭೆ ಬಳಿಕ ಮತ್ತೆ ಗ್ರೂಪ್ಗೆ ಆ್ಯಡ್ ಮಾಡಿದೆ. ಆನ್ ಲೈನ್ ಶಿಕ್ಷಣದ ಶುಲ್ಕ ಕಟ್ಟಿಲ್ಲವೆಂದು ಶಿಕ್ಷಣ ಸಂಸ್ಥೆ ಅಮಾನವೀಯವಾಗಿ ನಡೆದುಕೊಂಡಿತ್ತು. ಪೋಷಕರು ಕರೆ ಮಾಡಿದರೆ ಶುಲ್ಕ ಕಟ್ಟಿಲ್ಲ ಇದರಿಂದ ಆಟೋಮ್ಯಾಟಿಕ್ ಆಗಿ ರಿಮೂವ್ ಆಗಿದೆ ಎಂಬ ಉತ್ತರ ಬಂದಿತ್ತು. ಶಿಕ್ಷಣ ಸಂಸ್ಥೆಯವರ ಜೊತೆ ಪೋಷಕರು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿತ್ತು. ನಂತರ ಪೋಷಕರ ಜೊತೆ ಸಭೆ ನಡೆಸಿದ ಶಾಲಾ ಆಡಳಿತ ಮಂಡಳಿ ಸಭೆ ನಂತರ ಆಗಸ್ಟ್ ತಿಂಗಳ ಕೊನೆವರೆಗೂ ಶುಲ್ಕ ಕಟ್ಟಲು ಅವಕಾಶ ನೀಡಿದೆ ಎಂದು ವಿದ್ಯಾರ್ಥಿಗಳ ಪೋಷಕರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)