ಕರ್ನಾಟಕಪ್ರಮುಖ ಸುದ್ದಿ

ಗುಣಮಟ್ಟದ ಕೋವಿಡ್ 19 ಟೆಸ್ಟ್: ಕರ್ನಾಟಕಕ್ಕೆ ಅಗ್ರ ಸ್ಥಾನ

ಬೆಂಗಳೂರು,ಜು.27-ಗುಣಮಟ್ಟದ ಕೋವಿಡ್-19 ಟೆಸ್ಟ್ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಅಧ್ಯಯನವೊಂದು ಹೇಳಿದೆ.

ಈ ಬಗ್ಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಟೆಕ್ ಇಂಡಸ್ಟ್ರಿ (ಯುಎಸ್) ಮತ್ತು ಏರೋಸಾಲ್ ಇಂಡಸ್ಟ್ರಿ (ಸ್ವಿಟ್ಜರ್ಲೆಂಡ್) ಸಂಸ್ಥೆಗಳು ಅಧ್ಯಯನ ನಡೆಸಿದ್ದು, ಭಾರತದಲ್ಲಿ ಕೋವಿಡ್-19 ಟೆಸ್ಟ್ ನಡೆಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ, ಒಡಿಶಾ, ಕೇರಳದಲ್ಲಿ ಟೆಸ್ಟ್ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಿದೆ.

ಕೋವಿಡ್ ಟೆಸ್ಟ್ ನಡೆಸುವ ಗುಣಮಟ್ಟದ ಪ್ರಮಾಣದ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಗಿದ್ದು, ಈ ಪೈಕಿ ಕರ್ನಾಟಕ 0.61 ಅಂಕಗಳಿಕೆಯೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 0.52 ಅಂಕದೊಂದಿಗೆ ಕೇರಳ 2ನೇ ಸ್ಥಾನದಲ್ಲಿ, 0.51 ಅಂಕಗಳೊಂದಿಗೆ ಒಡಿಶಾ ಮೂರನೇ ಸ್ಥಾನದಲ್ಲಿದೆ.

ಉಳಿದಂತೆ ಪುದುಚೇರಿ (0.51), ತಮಿಳುನಾಡು (0.51). ಮೇಘಾಲಯ (0.13), ಹಿಮಾಚಲ ಪ್ರದೇಶ (0.13), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (0.17) ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ (0.0), ಬಿಹಾರ (0.0) ಪಟ್ಟಿಯ ಕೊನೆಯ ಸ್ಥಾನದಲ್ಲಿವೆ.

ಮೇ-19ರಿಂದ ಜೂನ್ 1ರವರೆಗಿನ 2 ವಾರಗಳ ಕೋವಿಡ್ ಟೆಸ್ಟ್ ವರದಿಗಳನ್ನು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳು ಹಂಚಿಕೆ ಮಾಡಿಕೊಂಡಿದ್ದು, ಈ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ತನ್ನ ಸಂಶೋಧನೆಗೆ ಸಂಶೋಧಕರು 0 ಯಿಂದ 1 ಅಂಕ ನೀಡಿದ್ದು, ಈ ಪೈಕಿ ಕರ್ನಾಟಕ ಗರಿಷ್ಠ ಅಂದರೆ 0.61 ಅಂಕಗಳಿಸಿದೆ. ಲಭ್ಯತೆ, ಕೈಗೆಟುಕುವಿಕೆ, ದತ್ತಾಂಶ ಸಂಗ್ರಹಣೆ ಮತ್ತು ಗೌಪ್ಯತೆ ಎಂಬ ವಿಭಾಗಳಾಗಿ ವಿಂಗಡಿಸಿ ಸಂಶೋಧನೆ ನಡೆಸಲಾಗಿತ್ತು. (ಎಂ.ಎನ್)

Leave a Reply

comments

Related Articles

error: