ಮನರಂಜನೆ

ಲಾಸ್ ಏಂಜಲೀಸ್ ಫಿಲ್ಮ್ ಅವಾರ್ಡ್‍ಗೆ ‘ಉರ್ವೀ’

ಶ್ವೇತಾ ಪಂಡಿತ್, ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರಧಾರಿಗಳಾಗಿ  ಅಭಿನಯಿಸಿದ ಬಿ.ಎಸ್.ಪ್ರದೀಪ್ ವರ್ಮ ನಿರ್ದೇಶನದ ಉರ್ವೀ  ಚಿತ್ರ  ಲಾಸ್ ಏಂಜಲೀಸ್ ಫಿಲ್ಮ  ಅವಾರ್ಡ್‍ಗೆ ನಾಮ ನಿರ್ದೇಶನಗೊಂಡಿದೆ.

ವೇಶ್ಯಾವಾಟಿಕೆಯ ಜಾಲ, ಮಹಿಳಾ ಶೋಷಣೆಯ ಕಥಾಹಂದರವಿರುವ ಹೊಸ ಬಗೆಯ ಸಿನಿಮಾ ‘ಉರ್ವೀ’ ಕಲಾವಿದರ ನೈಜ ಅಭಿನಯ ಹಾಗೂ ಪರಿಣಾಮಕಾರಿ ನಿರ್ದೇಶನದಿಂದ ಪ್ರೇಕ್ಷಕರ ಗಮನ ಸೆಳೆದಿದೆ. ಹೆಣ್ಣಿನ ವಿರುದ್ಧ ನಡೆಯುವ ಜಾಗತಿಕ ದೌರ್ಜನ್ಯ ಕೆಂಪು ದೀಪದ ಮಾಂಸದಂಧೆಯ ಕರಾಳ ರೂಪವನ್ನು  ಪರಿಣಾಮಕಾರಿಯಾಗಿ ತೆರೆ ಮೇಲೆ ಮೂಡಿಸಲು ನಿರ್ದೇಶಕ ಪ್ರದೀಪ್ ಯಶಸ್ವಿಯಾಗಿದ್ದಾರೆ.

ನೀಲಿ ಲೋಕದ ಭೀಕರತೆಯನ್ನು ಬಿಂಬಿಸುವ ಚಿತ್ರದ ಪ್ರಮುಖ ಪಾತ್ರದಲ್ಲಿ  ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದು, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್‍, ಅಚ್ಯುತ್ ಕುಮಾರ, ಭವಾನಿ ಪ್ರಕಾಶ್ ಅವರುಗಳು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2016ನೇ ವರ್ಷದಲ್ಲಿ ಸ್ಯಾಂಡಲ್ ವುಡ್‍ನಲ್ಲಿ ಹಲವಾರು ಚಿತ್ರಗಳು ತೆರೆ ಕಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಅವುಗಳ ಸಾಲಿನಲ್ಲಿ ‘ಉರ್ವೀ’ ನೂತನ ಸೇರ್ಪಡೆಯಾಗಿದೆ. (ಕೆ.ಎಂ.ಆರ್- ಎಸ್.ಎಚ್.)

Leave a Reply

comments

Related Articles

error: