ಮೈಸೂರು

ಡಾ. ಎಪಿಜೆ ಅಬ್ದುಲ್ ಕಲಾಂ ಅವರ 5ನೇ ವರ್ಷದ ಪುಣ್ಯಸ್ಮರಣೆ : ಬೇರು ಪೌಂಡೇಶನ್ ನಿಂದ ರೋಗಿಗಳಿಗೆ ಹಣ್ಣು ಹಂಪಲು

ಮೈಸೂರು,ಜು.27:-  ಭಾರತದ ರಾಷ್ಟ್ರಪತಿಗಳಾಗಿದ್ದ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಬೇರು ಫೌಂಡೇಷನ್ ವತಿಯಿಂದ  ಒಂಟಿಕೊಪ್ಪಲ್ ವೃತ್ತದಲ್ಲಿರುವ ಡಿಆರ್ ಎಂ  ಹಾಸ್ಪಿಟಲ್  ನಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.

ನಂತರ ಮಾತನಾಡಿದ ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್  ಭಾರತವು ವಿಶ್ವದಲ್ಲೇ ಮಾದರಿ  ರಾಷ್ಟ್ರವಾಗಿ ನಿರ್ಮಾಣವಾಗಬೇಕೆನ್ನುವುದು  ಅಬ್ದುಲ್‌ ಕಲಾಂ ಅವರ ಮೂಲ ಧ್ಯೇಯವಾಗಿತ್ತು, ದೇಶ ಪ್ರಗತಿ ಸಾಧಿಸ ಬೇಕಾದರೆ  ವಿದ್ಯಾವಂತರು ಪದವೀಧರರ ಸಂಖ್ಯೆ ಹೆಚ್ಚಾಗಬೇಕಿದೆ. ಇಂದಿನ ದಿನಗಳಲ್ಲಿ ಉನ್ನತ ಸ್ಥಾನದಲ್ಲಿರುವ ಹಿರಿಯ ಸಾಧಕರನ್ನು ಗಮನಿಸಿದರೆ ಅವರೆಲ್ಲರೂ  ಸರ್ಕಾರಿ ಶಾಲೆಯಲ್ಲೇ ಓದಿದವರು.   ಇಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣದ ಕೇಂದ್ರವಾಗಿ ಮಾರ್ಪಟ್ಟಿದೆ, ಅಬ್ದುಲ್ ಕಲಾಂ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಅವರಂತೆ ಪಾಲಿಸಲು ಮುಂದಾದರೆ ಸಾಧಕರಾಗಿ ಸಮಾಜದಲ್ಲಿ ಉನ್ನತ ಸ್ಥಾನಕೇರಬಹುದು ಎಂದು ಹೇಳಿದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿಗಳಾದ ಜಯ್  ಅರ್ಜುನ್,  ವಿಜಿಲೆನ್ಸಿ ಸದಸ್ಯರಾದ ಶಿವಪ್ರಕಾಶ್ , ಡಿಆರ್ ಎಂ  ಆಸ್ಪತ್ರೆಯ ಮ್ಯಾನೇಜರ್  ಲೋಕೇಶ್, ಸಂತೋಷ್ ,ಸಚಿನ್ ಹಾಗೂ ಬೇರು ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: