ಪ್ರಮುಖ ಸುದ್ದಿಮೈಸೂರು

ಸಚಿವ ಎಸ್ ಟಿ.ಸೋಮಶೇಖರ್ ಆಪ್ತ ಸಿಬ್ಬಂದಿಗೆ ಕೊರೋನಾ : ಕ್ವಾರೆಂಟೈನ್ ನಲ್ಲಿ ಸಚಿವರು

ಮೈಸೂರು/ಬೆಂಗಳೂರು,ಜು.28:-   ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ.ಸೋಮಶೇಖರ್ ಅವರ ನೆಲ ಮಹಡಿ ಕೊಠಡಿ ಸಂಖ್ಯೆ 38-39 ರಲ್ಲಿ ಆಪ್ತ ಸಿಬ್ಬಂದಿಯೊಬ್ಬರಿಗೆ ಕೊರೋನಾ  ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುವುದು.

ಈ ಹಿನ್ನೆಲೆಯಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೋಂಕ್ವಾರಂಟೇನ್ ಗೆ ಒಳಗಾಗಲಿದ್ದಾರೆ. ಅಲ್ಲದೆ ಇಂದಿನಿಂದ ಏಲು ದಿನಗಳ ಕಾಲ ಸಾರ್ವಜನಿಕ ಪ್ರವೇಶವನ್ನು ಸಹ ನಿರ್ಬಂಧಿಸಲಾಗಿದೆ ಎಂದು ಸಹಕಾರಿ ಸಚಿವರ ವಿಶೆಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ, ಎಸ್ಎಚ್)

Leave a Reply

comments

Related Articles

error: