ಪ್ರಮುಖ ಸುದ್ದಿ

ಚಾಮರಾಜನಗರದಲ್ಲಿ 42ಕೋವಿಡ್ ಪ್ರಕರಣ ಪತ್ತೆ

ರಾಜ್ಯ(ಚಾಮರಾಜನಗರ)ಜು.29:- ಜಿಲ್ಲೆಯಲ್ಲಿ 42 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 18 ಮಂದಿ ಕೋವಿಡ್ 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದೀಗ ಜಿಲ್ಲೆಯಲ್ಲಿ 225 ಸಕ್ರಿಯ ಪ್ರಕರಣಗಳಿದ್ದು ದಾಖಲಾಗಿರುವ ಪ್ರಕರಣಗಳಲ್ಲಿ 6 ಮಂದಿ ಹೊರ ಜಿಲ್ಲೆಯವರೂ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 700 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 571 ಪ್ರಕರಣಗಳು ದೃಢಪಟ್ಟಿವೆ. 340 ಮಂದಿ ಗುಣಮುಖರಾಗಿದ್ದಾರೆ. 5 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ 5 ಮಂದಿ ಮೃತಪಟ್ಟಿದ್ದಾರೆ.
ಕೊಳ್ಳೇಗಾಲ ತಾಲೂಕಿನ 14, ಯಳಂದೂರು ತಾಲೂಕಿನ 10, ಗುಂಡ್ಲುಪೇಟೆ ತಾಲೂಕಿನ 8, ಚಾಮರಾಜನಗರ ತಾಲೂಕಿನ 4 ಮಂದಿಗೆ ಸೋಂಕು ದೃಢಪಟ್ಟಿದೆ. ಮೈಸೂರು ಜಿಲ್ಲೆಯ ಮೂಗೂರು, ಗಟ್ಟವಾಡಿ, ತಿ. ನರಸೀಪುರ, ಪಡುವಾರಹಳ್ಳಿಯ ತಲಾ ಓರ್ವರಿಗೆ ಹಾಗೂ ನಾಯ್ಡುನಗರದ ಇಬ್ಬರಿಗೆ ಸೋಂಕು ದೃಢಪಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: