ಪ್ರಮುಖ ಸುದ್ದಿಮೈಸೂರು

ಜು.30 ಮತ್ತು 31 ಸಿಇಟಿ ಪರೀಕ್ಷೆಗೆ ಮುನ್ನೆಚ್ಚರಿಕಾ ಕ್ರಮ ; ಕೋವಿಡ್ ಪೀಡಿತ ವಿದ್ಯಾರ್ಥಿಗಳಿಗೆ ಕೋವಿಡ್ ಸೆಂಟರ್ ನಲ್ಲೇ ಪರೀಕ್ಷೆ ; ಡಿಸಿ ಅಭಿರಾಮ್ ಜಿ.ಶಂಕರ್

ಮೈಸೂರು,ಜು.29:- ಕರ್ನಾಟಕ ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳಿಗಾಗಿ ನಡೆಯುವ ಸಿಇಟಿ ಜು.30 ಮತ್ತು 31 ಅಂದರೆ ನಾಳೆ ಮತ್ತು ನಾಡಿದ್ದು ಮೈಸೂರು ಜಿಲ್ಲೆಯ 26ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅವರಿಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಮೂಲಕ ನೇರ ಸಂದೇಶ ನೀಡುವ ಮೂಲಕ ಮಾತನಾಡಿ 30ರಂದು ಬೆಳಿಗ್ಗೆ  10.30ರಿಂದ 11.50ರ ತನಕ ಜೀವಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50 ರ ತನಕ ಗಣಿತ, 31ಕ್ಕೆ 10.30ರಿಂದ 11.50 ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರ ತನಕ  ರಸಾಯನ ಶಾಸ್ತ್ರ ಇರಲಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ 26 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು,  20 ಮೈಸೂರು ನಗರದಲ್ಲಿ ಮತ್ತು 6ತಾಲೂಕುವಾರುಗಳಲ್ಲಿ ಇರಲಿದೆ.  10.368 ವಿದ್ಯಾರ್ಥಿಗಳು ಸಿಇಟಿ ಬರೆತಿದ್ದಾರೆ.  200ಮೀಟರ್ ವ್ಯಾಪ್ತಿಯಲ್ಲಿ 144    ಸಿಆರ್ ಪಿಸಿ ಅಡಿಯಲ್ಲಿ ಜೆರಾಕ್ಸ್ ಅಂಗಡಿ ಮುಚ್ಚಲು , ಗುಂಪು ಗೂಡುವುದನ್ನು ನಿಷೇಧಿಸಲು ನಿಷೇಧಾಜ್ಞೆ ಜಾರಿಯಲ್ಲಿರಲಿದೆ.  ಪಿಯು ಎಸ್ ಎಸ್ ಎಲ್ ಸಿ ಯಲ್ಲಿ ಮಾಡಿದಂತೆ ಕೊಠಡಿಗಳನ್ನು ಸ್ಯಾನಿಸೈಟ್ ಮಾಡಲಾಗಿದೆ.  ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇದೆ.  2ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರಬೇಕು.  ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಬರಬೇಕು,  ಸಿಇಟಿ ಪ್ರವೇಶಪತ್ರದ ಜೊತೆ ಒಂದು ಗುರುತಿನ ಚೀಟಿ ತರಬೇಕು. ಮೂವರು ಕೋವಿಡ್  ವಿದ್ಯಾರ್ಥಿಗಳಿದ್ದು ಅವರಿಗೆ ಮಂಡಕಳ್ಳಿ ಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ  ಪರೀಕ್ಷೆ ಬರೆಯಲು ಅವಕಾಸ ಕಲ್ಪಿಸಲಾಗಿದೆ.  ಅವರು ಎಲ್ಲಿರ್ತಾರೋ ಅಲ್ಲಿಮದ ಆ್ಯಂಬುಲೆನ್ಸ್ ನಲ್ಲಿ ಕರೆತರಲಾಗುವುದು.  ಅಲ್ಲಿಂದ ಕರೆದುತಂದು ಅಲ್ಲೇ ಬಿಡುವ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ವೈದ್ಯರು, ಪ್ರಾಂಶುಪಾಲರು , ಉಪನ್ಯಾಸಕರು ಇರಲಿದ್ದಾರೆ, ಅವರ ಉತ್ತರಪತ್ರಿಕೆಗಳನ್ನು ಸರಪರೇಟ್ ಬಾಕ್ಸ್ ನಲ್ಲಿಟ್ಟು ಒಂದು ವಾರದ ನಂತರ ತೆರೆಯಲು ಸೂಚನೆ ನೀಡಲಾಗಿದೆ ಎಂದರು.

ಪ್ರತಿ ವಿದ್ಯಾರ್ಥಿ ಅವರದ್ದೇ ಆದ ನೀರಿನ ಬಾಟಲ್ ತರಬಹುದು. ಅಪೇಕ್ಷೆ ಪಟ್ಟಲ್ಲಿ ಅವರದ್ದೇ ಆಹಾರದ ಡಬ್ಬ ತರಬಹುದು.  ಕೆಮ್ಮು ನೆಗಡಿ, ಜ್ವರ, ಗಂಟಲು ಕೆರೆತದಿಂದ ಬಳಲುತ್ತಿರುವ ಅಥವಾ ಕಂಟೈನ್ ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗೆ ಕನಿಷ್ಠ ಒಂದು ವಿಶೇಷ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಜಿಲ್ಲಾ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಆಲ್ಟ್ರಾನೇಟ್ ಮಾಡಕೆ ಹೇಳಿದಾರೆ, ಪ್ರತಿ ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳು ಬೆಂಚಿನ ತುದಿಗೆ ಕೂರುವಂತೆ ಸೂಚನೆ ಕೊಟ್ಟಿದ್ದಾರೆ. ಹತ್ತಿರ ಕೂರಬಾರದು, ಬೆಂಚ್ ನಡುವೆ  ಮೂರಡಿ ಗ್ಯಾಪ್ ಇರಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ಇರಬೇಕಾಗಲಿದೆ ಎಂದರು.

ಥರ್ಮಲ್ ಸ್ಕ್ಯಾನರ್, ಪ್ರಥಮ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇರಬೇಕಾಗತ್ತೆ. ಇದಲ್ಲದೆ ನಾವು ಒಂದೈದು ಪರೀಕ್ಷಾ  ಕೇಂದ್ರಗಳಿಗೆ ಆ್ಯಂಬುಲೆನ್ಸ್ ಗುರುತಿಸಿದ್ದೇವೆ. ಯಾವುದಾದರೂ ಎಮರ್ಜೆನ್ಸಿ ಇದ್ದಲ್ಲಿ ಸಿಗಲಿದೆ.  ಆರೋಗ್ಯ ತಪಾಸಣೇ ಕೌಂಟರ್ ಗಳು ಬೆಳಿಗ್ಗೆ 8ಗಂಟೆಯಿಂದಲೇ ಪ್ರಾರಂಭವಾಗಲಿದೆ.  ಜಿಲ್ಲಾ ಮತ್ತು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಗುರ್ತಿಸಿ   ಆ್ಯಂಬುಲೆನ್ಸ್ ನ್ನು ಇಡಲಾಗಿದೆ.

ಕಂಟೈನ್ ಮೆಂಟ್ ಝೋನ್ ನಿಂದ ಬರುವ ವಿದ್ಯಾರ್ಥಿಗೆ , ಲಕ್ಷಣ ಇರುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಯಾರು ಪಾಸಿಟಿವ್ ಇರ್ತಾರೆ ಅವರು ಮಾತ್ರ ಕೋವಿಡ್ ಸೆಂಟರ್ ನಲ್ಲಿ ಬರೆಯಲಿದ್ದಾರೆ ಎಂದರು.

. ಕ್ವಾರೆಂಟೈನ್ ಇದ್ದೀರಿ, ನೆಗಡಿ ಜ್ವರ ಇದೆ, ಅವರು ಮಾಹಿತಿ ಮರೆ ಮಾಚಬೇಡಿ, ಸಪರೇಟ್ ಆಗತ್ತೆ ಎನ್ನುವ ಯೋಚನೆ ಮಾಡುವ ಅಗತ್ಯವಿಲ್ಲ, ಮುಜುಗರ ಪಡುವ, ಹೈಡ್ ಮಾಡುವ ಅವಶ್ಯಕತೆ ಇಲ್ಲ, ಹಲವು ಅಧಿಕಾರಿಗಳನ್ನು ರೂಟ್ ಆಫೀಸರ್ ಗಳಾಗಿ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಇದೆ ಎಂದರು. ಕೋವಿಡ್ ಇರುವವರು ಎನ್-95  ಮಾಸ್ಕ್  ಫೇಸ್ ಶೀಲ್ಡ್ ಧರಿಸಿ, ಮುಂಜಾಗ್ರತೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಪಿಯು ವಿಭಾಗ ಸಜ್ಜಾಗಿದೆ. ಭಯ ಗಾಬರಿ ಬೇಡ, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಪೋಷಕರು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: